ನಮ್ಮ ವಿಮಾನ ಪಡೆಯಿಂದ ಪರಿಣಾಮಕಾರಿ ಕಾರ್ಯಾಚರಣೆ: ಸೀತಾರಾಂ ಯೆಚೂರಿ

ನಮ್ಮ ವಿಮಾನ ಪಡೆಯಿಂದ ಪರಿಣಾಮಕಾರಿ ಕಾರ್ಯಾಚರಣೆ: ಸೀತಾರಾಂ ಯೆಚೂರಿ

“ಸಂಕುಚಿತ ಅಬ್ಬರವನ್ನು ಹರಡುವ, ಉದ್ವಿಗ್ನತೆಯನ್ನು ಪ್ರಚೋದಿಸುವ ಪ್ರಯತ್ನ ಬೇಡ”

ನವದೆಹಲಿ: ಕೇಂದ್ರ ಸರಕಾರದ ಹಿರಿಯ ಮಂತ್ರಿಗಳು ಫೆಬ್ರುವರಿ
26 ರ ಸಂಜೆ ಪ್ರತಿಪಕ್ಷಗಳ ಮುಖಂಡರ ಸಭೆ ಕರೆದು ಭಾರತೀಯ ವೈಮಾನಿಕ ಪಡೆ ಆ ದಿನ ಮುಂಜಾನೆ ನಡೆಸಿದ ಪ್ರಹಾರಗಳ
ಬಗ್ಗೆ ತಿಳಿಸಿದರು.

“ ನಮ್ಮ ವಿಮಾನ ಪಡೆ
ಒಂದು ಪರಿಣಾಮಕಾರಿ ಕಾರ್ಯಾಚರಣೆ ನಡೆಸಿದೆಯೆಂಬುದನ್ನು ಗಮನಿಸಿ ಉತ್ಸಾಹಭರಿತರಾಗಿದ್ದೇವೆ”
ಎಂದು ಈ ಬಗ್ಗೆ ಸಿಪಿಐ(ಎಂ) ಪ್ರಧಾನ
ಕಾರ್ಯದರ್ಶಿ ಸೀತಾರಾಂ ಯೆಚುರಿ ತಮ್ಮ ಫೇಸ್‍ಬುಕ್ ಪುಟದಲ್ಲಿ ಹೇಳಿದ್ದಾರೆ.

ಇದೊಂದು “ಭಯೋತ್ಪಾದನಾ-ವಿರೋಧಿ” ಪ್ರಹಾರ ಮತ್ತು “ಸೈನಿಕೇತರ” ಸ್ವರೂಪದ್ದು ಎಂದು ಸರಕಾರ ಒತ್ತಿ ಹೇಳಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಸಂಕುಚಿತ ದೇಶಭಕ್ತಿಯ ಅಬ್ಬರವನ್ನು ಎಬ್ಬಿಸುವ ಮತ್ತು ಉದ್ರಿಕ್ರತೆಯನ್ನು ಪ್ರಚೋದಿಸುವ ಪ್ರಯತ್ನಗಳು ನಡೆಯಬಾರದು ಎಂದು ನಾವು ಹೇಳಿದೆವು ಎಂದು ಯೆಚುರಿ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಉಂಟಾಗಿರುವ ಆತಂಕ ಮತ್ತು ಅಭದ್ರತೆಯ ಭಾವವನ್ನು ತಗ್ಗಿಸಬೇಕು, ಅದು ಹಬ್ಬದಂತೆ ಕೇಂದ್ರ ಸರಕಾರ ನೋಡಿಕೊಳ್ಳಬೇಕು. ಸಂವಿಧಾನದ 370ನೇ ಕಲಮು, 35ಎ ಕಲಮು ಮುಂತಾದ ವಿವಾದಾಸ್ಪದ ವಿಷಯಗಳನ್ನು ಈಗ ಎತ್ತುವುದು ತದ್ವಿರುದ್ಧವಾದ ಮತ್ತು ಅನಾಹುತಕಾರಿ ಪರಿಣಾಮಗಳನ್ನು ಬೀರುತ್ತದೆ ಎಂದಿರುವ ಯೆಚುರಿಯವರು “ಭಾರತದ ಬೇರೆ ಭಾಗಗಳಲ್ಲಿ ವಾಸಿಸುತ್ತಿರುವ ಕಾಶ್ಮೀರಿಗಳ ಮೇಲೆ ಹಲ್ಲೆಗಳನ್ನು ನಡೆಸಲು ಸರಕಾರ ಬಿಡಬಾರದು. ಇದು ಭಾರತದ ಐಕ್ಯತೆ ಮತ್ತು ಸಮಗ್ರತೆಯನ್ನು ಗಟ್ಟಿಗೊಳಿಸುವುದಿಲ್ಲ, ಬದಲಾಗಿ ನಾಶ ಮಾಡುತ್ತದೆ” ಎಂದು ಎಚ್ಚರಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos