ತಮಿಳುನಾಡು: ಭಾರಿ ಮಳೆಯಿಂದ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ!

ತಮಿಳುನಾಡು: ಭಾರಿ ಮಳೆಯಿಂದ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ!

ತಮಿಳುನಾಡು: ತಮಿಳುನಾಡಿನಲ್ಲಿ ಭಾರಿ ಮಳೆ ಸದ್ಯಕ್ಕಂತೂ ನಿಲ್ಲುವ ಲಕ್ಷಣ ಕಾಣುತ್ತಿಲ್ಲ.  ತಮಿಳುನಾಡಿನಲ್ಲಿ ಭಾರಿ ಮಳೆಯಿಂದ ಸಾಕಷ್ಟು ಅನಾಹುತಗಳು ಸೃಷ್ಟಿಯಾಗುತ್ತಿದೆ. ನಾಲ್ಕು ಜಿಲ್ಲೆಗಳಲ್ಲಿ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ ಹೆಚ್ಚಾಗಿ ಮಳೆ ಬೀಳುತ್ತಿರುವ ಕಾರಣ ಮುಂಜಾಗ್ರತೆಯಾಗಿ ಸರ್ಕಾರ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಪ್ರಮುಖವಾಗಿ ಚೆನ್ನೈ, ತಿರುವನ್ಹಳ್ಳಿ, ತೆಂಕಾಸಿ, ರಮನಾಥಪುರಂ, ತೂತು ಪುಡಿ, ಕನ್ಯಾಕುಮಾರಿ ಸೇರಿ ಹಲವಾರು ಕಡೆ ಭಾರಿ ಮಳೆ ಆಗುತ್ತಿರುವ ಕಾರಣ ರಸ್ತೆಯಲ್ಲಿ ಜನ ಸಂಚಾರ ಕಷ್ಟಕರವಾಗಿದೆ. ತಮಿಳುನಾಡಿನಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ, ಈಗಾಗಲೇ ಸೇತುವೆಗಳು ಮುಳುಗಡೆಯಾಗಿ ಮನೆಗಳಿಗೂ ಸಹ ನೀರು ನುಂಗಿದೆ. ಈ ಕಾರಣಗಳಿಂದಾಗಿ ಶಾಲಾ ಕಾಲೇಜುಗಳಿಗೆ ಹೋಗುವುದಕ್ಕೆ ತುಂಬಾ ಕಷ್ಟಕರವಾಗಿದೆ ರಸ್ತೆಗಳೆಲ್ಲ ಜಲಾವೃತವಾಗಿದೆ. ಈ ಕಾರಣಗಳಿಂದಾಗಿ ನಾಲ್ಕು ತಾಲೂಕುಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ .

ಫ್ರೆಶ್ ನ್ಯೂಸ್

Latest Posts

Featured Videos