ಮಾರ್ಕೆಟ್ ಗೆ ಬರಬೇಡಿ, ಮನೆ ಬಾಗಲಿಗೆ ಬರಲಿದೆ ತರಕಾರಿ

ಮಾರ್ಕೆಟ್ ಗೆ ಬರಬೇಡಿ, ಮನೆ ಬಾಗಲಿಗೆ ಬರಲಿದೆ ತರಕಾರಿ

ಗದಗ, ಮಾ. 25: ಕೊರೊನಾ(ಕೋವಿಡ್ 19) ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ ನಾಳೆಯಿಂದ ಮನೆ ಮನೆಗೆ ತರಕಾರಿ  ಮಾರಾಟಕ್ಕೆ ಕ್ರಮ ಜರುಗಿಸಲಾಗುತ್ತಿದೆ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ ತಿಳಿಸಿದರು.

ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ಆವರಣದಲ್ಲಿಂದು ಜರುಗಿದ ತರಕಾರಿ, ಕಿರಾಣಿ ಹಾಗೂ ಹೊಟೇಲ್ ವರ್ತಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರಸಭೆ ವ್ಯಾಪ್ತಿಯ ತರಕಾರಿ ಮಾರುಕಟ್ಟೆಗಳಲ್ಲಿ ಜನಸಾಂದ್ರತೆ ಹೆಚ್ಚಾಗುತ್ತಿದ್ದು, ಇದರಿಂದ ವೈರಸ್ ತಗಲುವ ಭೀತಿಯಿದ್ದು ಮುಂಜಾಗ್ರತಾ ಕ್ರಮವಾಗಿ ನಾಳೆಯಿಂದ ನಗರದ ತರಕಾರಿ ಮಾರುಟ್ಟೆಗಳನ್ನು ಬಂದ ಮಾಡಲಾಗುತ್ತಿದೆ ಎಂದು ತಿಳಿಸಿದರು.

ನಗರ ಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಾಳೆಯಿಂದ ತರಕಾರಿಗಳನ್ನು ವಾರ್ಡವಾರು ತಳ್ಳು ಗಾಡಿಗಳ ಮುಖಾಂತರ ಮನೆ ಮನೆಗೆ ಮಾರಾಟ ಮಾಡಲು ವರ್ತಕರು ಸಹಮತ ವ್ಯಕ್ತ ಪಡಿಸಿದ್ದು, ಈ ಕಾರ್ಯಕ್ಕೆ ಪೊಲೀಸ್ ಇಲಾಖೆ ಅಗತ್ಯದ ಸಹಕಾರ ನೀಡಲಾಗುವದು.

ವಾರ್ಡವಾರು ತರಕಾರಿ ಮಾರಾಟ ಮಾಡುವ ವರ್ತಕರಿಗೆ ಗುರುತಿನ ಚೀಟಿಗಳನ್ನು ನೀಡಲಾಗುವದು ವರ್ತ ಕರು, ವ್ಯಾಪಾರಸ್ಥರು ಸಾಮಾಜಿ ಅಂತರ ಕಾಯ್ದುಕೊಳ್ಳುವ ಹಾಗೂ ಸ್ಯಾನಿಟೈಸರಗಳನ್ನುಬಳಸುವಂತೆ ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos