ಬ್ರಾಡ್ಮನ್ ದಾಖಲೆ ಮುರಿದ ರೋಹಿತ್

ಬ್ರಾಡ್ಮನ್ ದಾಖಲೆ ಮುರಿದ ರೋಹಿತ್

ರಾಂಚಿ, ಅ.21 : ರೋಹಿತ್ ಶರ್ಮಾ ದ್ವಿಶತಕ ಬಾರಿಸುವುದರ ಮೂಲಕ ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್ ಮನ್ ಸರ್ ಡಾನ್ ಬ್ರಾಡ್ಮನ್ ಅವರ 71 ವರ್ಷದ ಹಳೆಯ ದಾಖಲೆಯನ್ನೇ ಮುರಿದಿದ್ದಾರೆ. ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಚೊಚ್ಚಲ ದ್ವಿಶತಕ ಸಾಧನೆ ಮಾಡಿದ್ದಾರೆ. ತವರಿನ ಟೆಸ್ಟ್ ಕ್ರಿಕೆಟ್ನಲ್ಲಿ (ಕನಿಷ್ಠ 10 ಇನ್ನಿಂಗ್ಸ್) ಡಾನ್ ಬ್ರಾಡ್ಮನ್ 98.22ರ ಸರಾಸರಿ ಕಾಯ್ದುಕೊಂಡಿದ್ದರು. ದಾಖಲೆ ಮುರಿದಿರುವ ರೋಹಿತ್ ಇದಿಗ 99.84ರ ಸರಾಸರಿ ಕಾಪಾಡಿಕೊಂಡಿದ್ದಾರೆ.
ಟೆಸ್ಟ್ ಸರಣಿಯೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆಗೂ ರೋಹಿತ್ ಭಾಜನವಾಗಿದ್ದರು. ರಾಂಚಿ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಆರು ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ಈ ಮೂಲಕ ವೆಸ್ಟ್ಇಂಡೀಸ್ನ ಶಿಮ್ರಾನ್ ಹೆಟ್ಮಾಯೆರ್ ದಾಖಲೆಯನ್ನು ಮುರಿದಿದ್ದಾರೆ. 255 ಎಸೆತಗಳನ್ನು ಎದುರಿಸಿರುವ ರೋಹಿತ್ 28 ಬೌಂಡರಿ ಹಾಗೂ ಆರು ಸಿಕ್ಸರ್ ನೆರವಿನಿಂದ 212 ರನ್ ಗಳಿಸಿದ್ದಾರೆ. ಇದು ಟೆಸ್ಟ್ ಕ್ರಿಕೆಟ್ನಲ್ಲಿ ರೋಹಿತ್ ಜೀವನಶ್ರೇಷ್ಠ ಸಾಧನೆಯಾಗಿದೆ. ಆರಂಭಿಕನಾಗಿ ದ್ವಿಶತಕ ಬಾರಿಸುವ ಮೂಲಕ ಮಾಜಿ ದಿಗ್ಗಜ ವಿರಾಟ್ ಕೊಹ್ಲಿ, ಸುನಿಲ್ ಗವಾಸ್ಕರ್ ಸಾಲಿಗೂ ರೋಹಿತ್ ಶರ್ಮಾ ಸೇರ್ಪಡೆಯಾಗಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos