ಇಳಿಕೆಯಾಯ್ತು ಚಿನ್ನ, ದುಬಾರಿಯಾಯ್ತು ಬೆಳ್ಳಿ

ಇಳಿಕೆಯಾಯ್ತು ಚಿನ್ನ, ದುಬಾರಿಯಾಯ್ತು ಬೆಳ್ಳಿ

ನವದೆಹಲಿ: ಬುಧವಾರ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಂಗಾರದ ಬೆಲೆ 115 ರೂಪಾಯಿ ಇಳಿಕೆ ಕಂಡಿದ್ದು, 10 ಗ್ರಾಂ ಬಂಗಾರದ ಬೆಲೆ 33,210 ರೂಪಾಯಿಯಾಗಿದೆ.

ದುರ್ಬಲ ಜಾಗತಿಕ ಸೂಚ್ಯಂಕ ಮತ್ತು ಚಿನ್ನದ ಮಾರುಕಟ್ಟೆಯಲ್ಲಿ ಆಭರಣಗಳ ಬೇಡಿಕೆ ಕಡಿಮೆಯಾಗಿರುವುದು ಬಂಗಾರದ ಬೆಲೆ ಇಳಿಕೆಗೆ ಕಾರಣವಾಗಿದೆ. ಇನ್ನು ಬೆಳ್ಳಿ ಬೆಲೆಯಲ್ಲಿ ಬುಧವಾರ ಏರಿಕೆ ಕಂಡು ಬಂದಿದೆ.

ಬೆಳ್ಳಿ 310 ರೂಪಾಯಿ ಹೆಚ್ಚಳ ಕಂಡು ಕೆ.ಜಿ.ಗೆ 40,160 ರೂಪಾಯಿಯಾಗಿದೆ. ನಾಣ್ಯ ತಯಾರಕರು ಹಾಗೂ ಕೈಗಾರಿಕಾ ಘಟಕಗಳಲ್ಲಿ ಬೇಡಿಕೆ ಹೆಚ್ಚಾಗಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಶೇಕಡಾ 0.11 ರಷ್ಟು ಇಳಿಕೆ ಕಂಡು 1284.3 ಡಾಲರ್ ಪ್ರತಿ ಔನ್ಸ್ ಆಗಿದೆ.

ಇನ್ನು ಬೆಳ್ಳಿ ಬೆಲೆ ಶೇಕಡಾ 0.16 ರಷ್ಟು ಇಳಿಕೆ ಕಂಡು 15.43 ಡಾಲರ್ ಪ್ರತಿ ಔನ್ಸ್ ಆಗಿದೆ. ದೆಹಲಿ ಮಾರುಕಟ್ಟೆಯಲ್ಲಿ ಶೇಕಡಾ 99.9 ಹಾಗೂ ಶೇಕಡಾ 99.5 ರಷ್ಟು ಶುದ್ಧ ಚಿನ್ನದ ಬೆಲೆ 115 ರೂಪಾಯಿ ಹೆಚ್ಚಳ ಕಂಡು 10 ಗ್ರಾಂಗೆ 33,210 ರೂಪಾಯಿ ಮತ್ತು 33,060 ರೂಪಾಯಿಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos