ದಸರಾ ಪ್ರವಾಸಿಗರಿಗೆ ರುಚಿರುಚಿ ತಿಂಡಿ ರೆಡಿ

ದಸರಾ ಪ್ರವಾಸಿಗರಿಗೆ ರುಚಿರುಚಿ ತಿಂಡಿ ರೆಡಿ

ಮೈಸೂರು,ಸೆ. 30 : ನಗರದ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನ ಮತ್ತು ಲಲಿತ ಮಹಲ್ ಹೋಟೆಲ್ ಪಕ್ಕದ ಮುಡಾ ಮೈದಾನದಲ್ಲಿಆಹಾರಪ್ರಿಯರನ್ನು ಕೈಬೀಸಿ ಕರೆಯುತ್ತಿದೆ. ಬಗೆ ಬಗೆಯ, ರುಚಿಕರ ಆಹಾರ ಒದಗಿಸಲು ದಸರಾ ಆಹಾರ ಮೇಳ ಸಿದ್ಧವಾಗಿದೆ.
ಅರಮನೆಯಿಂದ ಆಹಾರ ಮನೆಗೆ ಎಂಬ ವಿಷಯದಡಿಯಲ್ಲಿ ಆಹಾರ ಮೇಳ ಉಪಸಮಿತಿಯು ಆಹಾರ ಮೇಳ ಆಯೋಜಿಸಿದ್ದು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ96 ಮಳಿಗೆ ಹಾಗೂ ಲಲಿತ ಮಹಲ್ ಹೋಟೆಲ್ ಪಕ್ಕದ ಮುಡಾ ಮೈದಾನದಲ್ಲಿ75 ಆಹಾರ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಇರುವ 96 ಮಳಿಗೆಗಳಲ್ಲಿಮೈಸೂರು ಪಾರಂಪರಿಕ, ಸಿರಿಧಾನ್ಯಗಳ, ಬುಡಕಟ್ಟು ಜನಾಂಗದ ಹಾಗೂ ಹೊರರಾಜ್ಯಗಳ ಖಾದ್ಯ ಸೇರಿದಂತೆ ದೇಶ-ವಿದೇಶ ಖಾದ್ಯಗಳು ಸಿದ್ಧಗೊಂಡಿವೆ. ಕೇರಳ, ತಮಿಳುನಾಡು , ರಾಜಾಸ್ಥಾನ ಹಾಗೂ ಟಿಬೆಟ್- ಚೈನೀಸ್ ಅಡುಗೆ ಮಳಿಗೆಗಳು ಸಿದ್ಧಗೊಳ್ಳುತ್ತಿರುವುದು ವಿಶೇಷವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos