ಡಂಕಿ, ಸಲಾರ್‌ಗೆ ಟಕ್ಕರ್‌ ಕೊಟ್ಟ ಡಿ ಬಾಸ್!

ಡಂಕಿ, ಸಲಾರ್‌ಗೆ ಟಕ್ಕರ್‌ ಕೊಟ್ಟ ಡಿ ಬಾಸ್!

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಾಟೇರ’ ಚಿತ್ರವು ಇದೇ ತಿಂಗಳು 29ರಂದು ರಂದು ಬಿಡುಗಡೆ ಆಗಲಿದೆ, ಈಗಾಗಲೇ ಚಿತ್ರದ ಪ್ರಮೋಶನ್‌ಗೆ ಸಂಬಂಧಪಟ್ಟು ಚಿತ್ರದ ಪೋಸ್ಟರ್, ಟ್ರೇಲರ್ ಬಿಡುಗಡೆಯಾಗಿ ಸಖತ್ ಕ್ರೇಜ್ ಸೃಷ್ಟಿಸಿದೆ.

ಸ್ಯಾಂಡಲ್‌ವುಡ್‌ ಚಾಲೆಂಜಿಂಗ್‌ ಸ್ಟಾರ್‌ ನಟ ದರ್ಶನ್ ಸಿನಿಮಾ ರಿಲೀಸ್ ಆಗುತ್ತಿದೆ ಅಂದರೆ, ಥಿಯೇಟರ್‌ನಲ್ಲಿ ಹಬ್ಬವಾಗಿದ್ದು, ಫಸ್ಟ್ ಡೇ ಫಸ್ಟ್ ಶೋ ಚಿತ್ರ ನೋಡುವುದಕ್ಕೆ ನೂಕು ನುಗ್ಗಲು ಕಾಮನ್ ಆಗಿರುತ್ತೆ. ಕಟೌಟ್ ಅಂತೆ, ಅದಕ್ಕೆ ಹೂವಿನ ಹಾರ, ಹಾಲಿನ ಅಭಿಷೇಕ ಜೊತೆಗೆ ಪಟಾಕಿ ಸಿಡಿಸಿ ಸಂಭ್ರಮ ಅಂತೆ ಇವೆಲ್ಲವೂ ಮಿಸ್ ಆಗುವುದಕ್ಕೆ ಸಾಧ್ಯವೇ ಇಲ್ಲ. ಇದೇ ಡಿಸೆಂಬರ್ 16ರಂದು ‘ಕಾಟೇರ’ ಚಿತ್ರದ ಟ್ರೇಲರ್ ರಿಲೀಸ್ ಆಗುತ್ತಿದ್ದು, ಎರಡು ವಾರಗಳ ಬಳಿಕ ಅಂದರೆ, ಡಿಸೆಂಬರ್ 29ರಂದು ಸಿನಿಮಾನೇ ರಿಲೀಸ್ ಆಗುತ್ತಿದೆ.

ಕಾಟೇರ ಚಿತ್ರವನ್ನು ‘ಸಲಾರ್’, ‘ಡಂಕಿ’ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳ ಬಿಡುಗಡೆಯಾಗಿ ಒಂದು ವಾರದೊಳಗೆ ಈ ಸಿನಿಮಾವನ್ನು ರಿಲೀಸ್ ಮಾಡೋಕೆ ಹೊರಟಿದ್ದು, ಎರಡು ಬಿಗ್ ಸಿನಿಮಾ ಮಧ್ಯೆ ‘ಕಾಟೇರ’ ಬೇಡವಾಗಿತ್ತು ಅಂತ ಮಾತನಾಡಿಕೊಂಡವರಿದ್ದಾರೆ. ಅಷ್ಟಾಗಿಯೂ ಡಿಸೆಂಬರ್ 29ಕ್ಕೆ ಯಾಕೆ ರಿಲೀಸ್ ಮಾಡಿದ್ದು, ಅನ್ನೋದನ್ನು ದರ್ಶನ್ ರಿವೀಲ್ ಮಾಡಿದ್ದಾರೆ. “ಡಿಸೆಂಬರ್ 29ಕ್ಕೆ ಯಾಕೆ ರಿಲೀಸ್ ಮಾಡುತ್ತಿದ್ದೇವೆ ಅಂದ್ರೆ, ನಮ್ಮ ಸಿನಿಮಾ, ನಮ್ಮ ಜಾಗವಿದು. ಯಾರಿಗೋ ಹೆದರಿಕೊಂಡು ನಾವ್ಯಾಕೆ ಬರಬೇಕ್ರಿ. ನಮ್ಮ ಮನೆಗೆ ಬರೋಕೆ ಅವರಿಗೆ ಹೆದರಿಕೆ ಇರಬೇಕು. ನಮಗ್ಯಾಕೆ ಹೆದರಿಕೆ. ನಮ್ಮ ಕನ್ನಡ ಜನ ಇದ್ದಾರಾ ಇಲ್ಲ ಅಂತ ನಮಗೆ ಡೌಟ್ ಬಂದು ಬಿಡಬೇಕು. ಕನ್ನಡ ಸಿನಿಮಾ ಚೆನ್ನಾಗಿದ್ದಾಗ ಯಾವಾಗಲೂ ಕನ್ನಡಿಗರು ಕೈ ಹಿಡಿದೇ ಹಿಡಿಯುತ್ತಾರೆ.” ಎಂದು ಆತ್ಮವಿಶ್ವಾಸದಿಂದಲೇ ದರ್ಶನ್ ಹೇಳಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos