ಅಕ್ರಮ ಸಾರಾಯಿ ಮಾರಾಟಕ್ಕೆ ಕಡಿವಾಣ ಹಾಕಿ

ಅಕ್ರಮ ಸಾರಾಯಿ ಮಾರಾಟಕ್ಕೆ ಕಡಿವಾಣ ಹಾಕಿ

ರಾಮದುರ್ಗ: ಓಬಳಾಪೂರ ಗ್ರಾಮ ಪಂಚಾಯತ್ ಮುಂದಿನ ಅಕ್ರಮ ಕಟ್ಟಡ ತೆರವು ಹಾಗೂ ಅಕ್ರಮ ಸಾರಾಯಿ ಮಾರಾಟಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಮಿನಿ ವಿಧಾನಸೌದಧ ಮುಂದೆ ಸಾಮಾಜಿಕ ಹೋರಾಟಗಾರ ಶ್ರೀನಿವಾಸಗೌಡ ಪಾಟೀಲ ನೇತೃತ್ವದಲ್ಲಿ ಅಲ್ಲಿನ ಸಾರ್ವಜನಿಕರು ನಡೆಸುತ್ತಿದ್ದ ಪ್ರತಿಭಟನೆಯನ್ನು ತಹಶೀಲ್ದಾರರು ಹಾಗೂ ತಾ.ಪಂ ಇಓ ಅವರ ಭರವಸೆ ಹಿನ್ನೆಲೆ ಮಂಗಳವಾರ ರಾತ್ರಿ ಹಿಂಪಡೆದುಕೊಂಡರು.
ತಾಲೂಕಿನ ಓಬಳಾಪೂರ ಗ್ರಾ.ಪಂ ಕಚೇರಿ ಮುಂದಿನ ರಾಷ್ಟ್ರಧ್ವಜ ಸ್ಥಂಬಕ್ಕೆ ಅಪಮಾನ ಮಾಡಿ ಅಕ್ರಮ ಕಟ್ಟಡ ಕಟ್ಟಿ ಅಲ್ಲಿಯೇ ಅಕ್ರಮ ಸಾರಾಯಿ ಮಾರಾಟಕ್ಕೆ ಸಹಕರಿಸಿದ ಗ್ರಾ.ಪಂ ಕಾರ್ಯದರ್ಶಿ ಹಾಗೂ ಸಮಿತಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಹಾಗೂ ಅಕ್ರಮ ಕಟ್ಟಡ ತೆರವುಗೊಳಿಸುವುದು ಹಾಗೂ ಅಕ್ರಮ ಸಾರಾಯಿ ಮಾರಾಟಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಅಹೋರಾತ್ರಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದರು.
ಮಂಗಳವಾರ ಮಧ್ಯಾಹ್ನ ತಾ.ಪಂ ಇಒ ಅವರು ಸಂಧಾನಕ್ಕೆ ಮುಂದಾದರು ಯಶಸ್ವಿಯಾಗಿರಲಿಲ್ಲ. ಆದರೇ ರಾತ್ರಿ ಧರಣಿ ಸ್ಥಳಕ್ಕೆ ತಹಶೀಲ್ದಾರ ಗಿರೀಶ ಸ್ವಾಧಿ, ತಾ.ಪಂ ಇಓ ಮುರಳಿಧರ ದೇಶಪಾಂಡೆ, ಹಾಗೂ ಪಿಎಸ್‌ಐ ಆನಂದ ಡೋಣಿ ಆಗಮಿಸಿ ಎರಡ್ಮೂರು ದಿನ ಕಾಲವಾಕಾಶ ನೀಡಿ, ಅಲ್ಲಿನ ಅಕ್ರಮ ಕಟ್ಟಡ ನಿರ್ಮಾಣದ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಹಾಗೂ ಸರಾಯಿ ಮಾರಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos