ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭ:

ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭ:

ಬಹು ನಿರೀಕ್ಷಿತವಾದ ಏಕದಿನ ವಿಶ್ವಕಪ್ ಟೂರ್ನಿಗೆ ಇನ್ನೇನು ಕೆಲವೇ ದಿನದ ಬಾಕಿ ಇದೆ. ಭಾರತದ ಕ್ರಿಕೆಟ್ ತಂಡ ಸದ್ಯ ಏಷ್ಯಾ ಕಪ್ 2023 ಕ್ಕಾಗಿ ಭರ್ಜರಿ ತಯಾರಿ ನಡೆಸಿದೆ. ಆಗಸ್ಟ್ 30ರಂದು ಈ ಮಹತ್ವದ ಟೂರ್ನಿಗೆ ಚಾಲನೆ ಸಿಗಲಿದೆ. ಟೀಮ್ ಇಂಡಿಯಾ ಸೆಪ್ಟೆಂಬರ್ 2 ರಂದು ಪಾಕಿಸ್ತಾನ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಏಷ್ಯಾಕಪ್ ಬಳಿಕ ಮತ್ತೊಂದು ಮಹತ್ವದ ಟೂರ್ನಿ ವಿಶ್ವಕಪ್ನಲ್ಲಿ ಭಾರತ ಕಣಕ್ಕಿಳಿಯಲಿದೆ.
ಇದೇ ಮೊದಲ ಬಾರಿಗೆ ಭಾರತ ಸಂಪೂರ್ಣ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸುತ್ತಿದೆ. ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ದೇಶದ ವಿವಿಧ ಮೈದಾನದಲ್ಲಿ ರಣ ರೋಚಕ ಪಂದ್ಯಗಳು ನಡೆಯಲಿದೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣ ಅಕ್ಟೋಬರ್ 14 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಆರಂಭಿಕ ಪಂದ್ಯ, ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ.
ಏಷ್ಯಾಕಪ್ನಲ್ಲಿ ಭಾರತ-ಪಾಕ್ ಸೆ. 2 ರಂದು ಮುಖಾಮುಖಿ ಆಗಲಿದೆ. ಈ ಪಂದ್ಯ ಮುಗಿದ ಮುಂದಿನ ದಿನ ವಿಶ್ವಕಪ್ಗೆ ತಂಡ ಆಯ್ಕೆ ಆಗಲಿದೆ.
ಭಾರತೀಯ ಕ್ರಿಕೆಟ್ ತಂಡವು ಏಷ್ಯಾಕಪ್ 2023 ಕ್ಕಾಗಿ ಬೆಂಗಳೂರಿನಿಂದ ಶ್ರೀಲಂಕಾ ಪ್ಲೈಟ್ ಏರಲಿದ್ದಾರೆ. ಕೊಲೊಂಬೊಕ್ಕೆ ತೆರಳಿ ಒಂದು ದಿನದ ವಿಶ್ರಾಂತಿ ಬಳಿಕ ರೋಹಿತ್ ಶರ್ಮಾ ಪಡೆ ಪುನಃ ಅಲ್ಲಿ ಅಭ್ಯಾಸ ಶುರು ಮಾಡಲಿದ್ದಾರೆ. ಭಾರತದ ಎಲ್ಲ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ.
ಇನ್ನು ಭಾರತದ ಹೆಮ್ಮೆಯ ಕ್ರೀಡಾಂಗಣ ಎಂದು ಹೆಸರು ಪಡೆದುಕೊಂಡಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವಕಪ್ ಪ್ರಾರಂಭವಾಗುವ ಒಂದು ದಿನದ ಮೊದಲು ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿದೆ. ಅಕ್ಟೋಬರ್ 4 ರಂದು ಅದ್ಧೂರಿ ಓಪನಿಂಗ್ ಸೆರಮನಿ ನಡೆಯಲಿದೆ.
ಐಸಿಸಿ ಏಕದಿನ ವಿಶ್ವಕಪ್ ಉದ್ಘಾಟನಾ ಸಮಾರಂಭದ ವೇಳೆ ಎಲ್ಲ ತಂಡದ ನಾಯಕರು ಹಾಜರಿರಲಿದ್ದಾರೆ. ಜೊತೆಗೆ ಮಾಧ್ಯಮದವರ ಜೊತೆ ಮಾತನಾಡಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos