ಗದಗ ಜಿಲ್ಲೆ ಈಗ ಕೊರೋನ ಮುಕ್ತ ಜಿಲ್ಲೆ

ಗದಗ ಜಿಲ್ಲೆ ಈಗ ಕೊರೋನ ಮುಕ್ತ ಜಿಲ್ಲೆ

ಗದಗ, 9. ಮೇ, 2020: ಗದಗ ಜಿಲ್ಲೆಯಲ್ಲಿ ಬಾಕಿಯಿದ್ದ ಮೂವರು ಸೋಂಕಿತರು ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಕೊವಿಡ್-19 ಸೋಂಕಿನಿಂದ ಉಳಿದ ಎಲ್ಲ 3 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಕ್ಕೆ ರಾಜ್ಯದ ಗಣಿ ಭೂವಿಜ್ಞಾನ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ, ಹಾಗೂ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರುಗಳು ಯಶಸ್ವಿಯಾಗಿ ಚಿಕಿತ್ಸೆ ನೀಡಿದ ವೈದ್ಯರಿಗೆ, ಆರೋಗ್ಯ ಸಿಬ್ಬಂದಿಗೆ ಅಭಿನಂದಿಸಿದ್ದಾರೆ.
ಗದಗ ಜಿಲ್ಲೆಯ ಗದಗ ಬೆಟಗೇರಿ ನಗರದಲ್ಲಿ ಕೊವಿಡ್-19 ಸೋಂಕು ದೃಢಪಟ್ಟಿದ್ದ ಐದು ಪ್ರಕರಣಗಳಿದ್ದವು. ಕೊವಿಡ್-19 ಸೋಂಕು ಧೃಡಪಟ್ಟಿದ್ದ ಪಿ-166  80ರ ವೃದ್ದೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತಿದ್ದು, ಕಾರ್ಡಿಯಾಕ್ ಅರೆಸ್ಟನಿಂದ ಆಸ್ಪತ್ರೆಯಲ್ಲಿ ಎಪ್ರೀಲ್ 9ರಂದು ಮೃತಪಟ್ಟಿದ್ದರು. ಅವರ ಸಂಪರ್ಕದಲ್ಲಿದ್ದ 59 ವರ್ಷದ ಮಹಿಳೆ ಪಿ-304 ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಮೇ. 1ರಂದು ಬಿಡುಗಡೆ ಹೊಂದಿದ್ದರು. ಇಂದು ದಿ. 9ರಂದು ಕೊವಿಡ್-19 ನಿಗದಿತ ಆಯುಷ್  ಆಸ್ಪತ್ರೆಯಿಂದ ಪಿ-370, ಪಿ-396 ಹಾಗೂ ಪಿ-514 ಅವರುಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದು, ಮೇ9ರ ಅಂತ್ಯಕ್ಕೆ ಗದಗ ಜಿಲ್ಲೆಯಲ್ಲಿ ಕೊವಿಡ್-19 ದೃಢ ಪ್ರಕರಣಗಳು ಯಾವುದು ಬಾಕಿ ಇರುವುದಿಲ್ಲವೆಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos