ಸಹಕಾರ ಸಂಘಗಳ ಗಣಕೀಕರಣ ಲೋಕಾರ್ಪಣೆ

ಸಹಕಾರ ಸಂಘಗಳ ಗಣಕೀಕರಣ ಲೋಕಾರ್ಪಣೆ

ಕೋಲಾರ: ಪ್ರಾಥಮಿಕ ಸಹಕಾರ ಸಂಘಗಳ ಸಂಪೂರ್ಣ ಗಣಕೀಕರಣ ಜಾರಿಗೊಳಿಸುತ್ತಿರುವ ಸಹಕಾರಿ ಬ್ಯಾಂಕುಗಳಲ್ಲಿ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ದಕ್ಷಿಣ ಭಾರತದಲ್ಲೇ ಪ್ರಥಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜನವರಿ ೧ ರಿಂದ ಗ್ರಾಹಕ ಸೇವೆಗೆ ಲೋಕಾರ್ಪಣೆಯಾಗಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ನಗರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇಶದ ಸಹಕಾರ ಬ್ಯಾಂಕ್‌ಗಳಲ್ಲಿ ಒರಿಸ್ಸಾ ರಾಜ್ಯ ಹೊರತು ಪಡಿಸಿದರೆ ಇಡೀ ದೇಶದಲ್ಲೇ ಪತ್ತಿನ ಸಹಕಾರ ಸಂಘಗಳ ಗಣಕೀಕರಣದ ಸಾಹಸಕ್ಕೆ ಕೈಹಾಕಿರುವ ಮೊದಲ ಬ್ಯಾಂಕ್ ನಮ್ಮ ಡಿಸಿಸಿ ಬ್ಯಾಂಕ್ ಎಂದು ಹರ್ಷ ವ್ಯಕ್ತಪಡಿಸಿದರು.
ಕಡತಗಳಿಂದ ಕಂಪ್ಯೋಟರೀಕರಣದ ಕಾಪಿರೈಟ್ ಮಾಡುವ ಮುನ್ನ ಸಮರ್ಪಕವಾಗಿ ಪರಿಶೀಲಿಸಿ ದಾಖಲು ಮಾಡಲು ಹೆಚ್ಚುವರಿ ಸಿಬ್ಬಂದಿಯನ್ನು ತಾತ್ಕಲಿಕವಾಗಿ ನೇಮಿಸಿಕೊಂಡು ಗಣಕೀರಣವನ್ನು ಪೂರ್ಣಗೊಳಿಸಬೇಕೆಂದು ಸೂಚಿಸಿದ ಅವರು ಜನವರಿಯಲ್ಲಿ ಪರಿಪೂರ್ಣ ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಮೈಕ್ರೋ ಎಟಿಎಂ ಸೇವೆಯೂ ಲಭ್ಯವಾಗಲಿದೆ ಎಂಧರು.
ಸಂಪೂರ್ಣ ಪ್ಯಾಕ್ಸ್ಗಣಕೀಕರಣ ವ್ಯವಸ್ಥೆಯ ಲೋಕಾರ್ಪಣೆಗೆ ರಾಜ್ಯದ ಸಹಕಾರಿ ಸಚಿವರು,ಸಹಕಾರಿ ದಿಗ್ಗಜರು, ಸಹಕರಿಗಳು ಪಾಲ್ಗೊಳಳಲಿದ್ದು, ಸಹಕಾರಿ ರಂಗದಲ್ಲಿ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡು ಜಿಲ್ಲೆಗಳ ೧೯೧ ಫಾಕ್ಸ್ಗಳ ಸಂಪೂರ್ಣ ಮಾಹಿತಿ ಗಣಕೀಕರಣಗೊಂಡು ಪಾರದರ್ಶಕ ಆಡಳಿತಕ್ಕೆ ಡಿಸಿಸಿ ಬ್ಯಾಂಕ್ ದೇಶದಲ್ಲೇ ಮಾದರಿಯಾಗಲಿದೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos