ನೋಡ ಬನ್ನಿ ಶರಣರ ಸೊಬಗ!

ನೋಡ ಬನ್ನಿ ಶರಣರ ಸೊಬಗ!

ಕಲಬುರಗಿ, ನ. 1 : ನಂಬಿಕೆ ಅನ್ನೋದೇ ದೇವರು, ನಂಬಿಕೆ ಬದುಕು, ನಂಬಿಕೆ ಭಕ್ತಿ, ನಂಬಿಕೆ ಶ್ರದ್ಧೆ, ನಂಬಿಕೆಯೇ ಧರ್ಮ, ನಂಬಿಕೆಟ್ಟವರಿಲ್ಲ ಅನ್ನೋದು ಲೋಕರೂಢಿ ಮಾತು. ನಂಬಿಕೆಯ ಬಗ್ಗೆ ಇಷ್ಟೊಂದು ಪೀಠಿಕೆ ಯಾಕೆ ಅಂತೀರಾ.. ನಂಬಿಕೆಯನ್ನ ಹರಕೆ ಅಂತಾನೂ ಭಕ್ತರು ಕರೆಯುತ್ತಾರೆ. ಹರಕೆ, ಇಷ್ಟಾರ್ಥ ಸಿದ್ಧಿಯ ಬಗ್ಗೆ ಹೇಳ್ಬೇಕು ಅಂದ್ರೇ ಕಲಬುರಗಿ ಜಿಲ್ಲೆಯ ಶರಣ ಬಸವೇಶ್ವರ ಆ ಬೆರಗು ನೋಡ ಬನ್ನಿ..
ಭಾವೈಕ್ಯತೆಯ ಹರಿಕಾರ, ಮಹಾ ದಾಸೋಹಿ ಶರಣಬಸವೇಶ್ವರರ ದೇವಾಲಯ ನೂಡಲು ದೇಶದ ನಾನಾ ಭಾಗಗಳಿಂದ ಆಗಮಿಸಿದ ಸಹಸ್ರಾರು ಭಕ್ತರು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿಸುತ್ತಾರೆ.

ಕಲಬುರಗಿಯ ಶರಣಬಸವೇಶ್ವರರು ಭಾವೈಕ್ಯತೆಯ ಹರಿಕಾರರು. ದಾಸೋಹದ ಸಾಕಾರಮೂರ್ತಿಗಳೆಂದೇ ಹೆಸರು ಪಡೆದ ಮಹಾ ದಾಸೋಹಿಗಳು. ಪಶು, ಪಕ್ಷಿಗಳಿಗೂ ದಾಸೋಹ ಮಾಡುವ ಮೂಲಕ ಗಮನ ಸೆಳೆದವರು. ಮಕ್ಕಳ ಸಂತಾದಿಂದ ಹಿಡಿದು ಇಷ್ಟಾರ್ಥಸಿದ್ಧಿ ಕರುಣಿಸುವ ದೇವರೆಂದೇ ಜನ ನಂಬಿದ್ದಾರೆ.
ದೇವಸ್ಥಾನವನ್ನು ಬಸವಣ್ಣರ ನೆನಪಿಗಾಗಿ ನಿರ್ಮಿಸಲಾಗಿದೆ. ಇಲ್ಲಿನ ಪಂಚಲೋಹ ಕಲಶ ನೋಡುಗರಿಗೆ ಆಕರ್ಷಣೆ. ದೇವಸ್ಥಾನದ ವಾಸ್ತುಕಲೆ 12ನೆ ಶತಮಾನದಿಂದ ಇದೆ.

ಗರ್ಭಗೃಹ: ಶರಣ ಬಸವೇಶ್ವರ ಸಮಾಧಿ ಇದೆ. ಶರಣ ಬಸವೇಶ್ವರರ ಮರಣದ ನಂತರ, ಅವರ ನೆನಪಿಗಾಗಿ ಒಂದು ಪವಿತ್ರವಾದ ದೇವಸ್ಥಾನವನ್ನು ಕಟ್ಟಿಸಿದರು. ಶರಣ ಬಸವೇಶ್ವರರ ಉತ್ಸಾಹಿ ಭಕ್ತ “ಅಡಿ ದೊಡ್ಡಪ್ಪ ಶರಣ” ಇವರಿಬ್ಬರೂ ಕೂಡಿ “ಶರಣ ಬಸವೇಶ್ವರ ಮಹಾದಾಸೋಹ ಪೀಠ” ಕಟ್ಟಿಸಿದರು. ಶರಣ ಬಸವೇಶ್ವರ ಮಹಾದಾಸೋಹ ಜಾತ್ರೆ ಪ್ರತಿ ವರ್ಷ ಮಾರ್ಚ್ ರಿಂದ ಏಪ್ರಿ ಲ್  ರವರಿಗೆ ನಡೆಯುತ್ತದೆ.

ಶರಣ ಬಸವೇಶ್ವರರು:ಮೂಲತಃ ಜೆವರ್ಗಿ ತಾಲೂಕಿನ ಅರಳಗುಂಡಿಯರಾದ ಶರಣ ಬಸವೇಶ್ವರರು 1746-1822 ವಿಶ್ವಗುರು ಬಸವೇಶ್ವರ ಅವರಿಂದ ಸ್ಥಾಪಿತ ಲಿಂಗಾಯತ ಧರ್ಮ ಸಂದೇಶಗಳ ಬಗ್ಗೆ ಪ್ರಚಾರ ಮಾಡುತ್ತ ಗುಲಬರ್ಗಾಕ್ಕೆ ಬಂದು ನೆಲೆ ನಿಂತು ಅದನ್ನು ತ್ರಿವಿಧ ದಾಸೋಹ ಮಾಡಿ ಮೆರೆದರು.

ಫ್ರೆಶ್ ನ್ಯೂಸ್

Latest Posts

Featured Videos