‘ಕಾಫಿ’ ದಣಿ ಇನ್ನೂ ನೆನಪು ಮಾತ್ರ

‘ಕಾಫಿ’ ದಣಿ ಇನ್ನೂ ನೆನಪು ಮಾತ್ರ

ಚಿಕ್ಕಮಗಳೂರು, ಆ. 3 : ಇಡೀ ಜಗತ್ತಿನ ಕಾಫಿಯ ಘಮಲನ್ನು ಪಸರಿಸಿದ, ಅಪ್ಪಟ ಸ್ನೇಹಿಮಯಿ ವ್ಯಕ್ತಿತ್ವದ ಸಿದ್ದಾರ್ಥ ಅವರ ಸಾವು ಕಂಡಿರುವುದುರ ನೋವಿನ ಸಂಗತಿ. ಈಗ ಅವರ ನೆನೆಪುಮಾತ್ರ. ಅವರನ್ನು ನೆನಸಿಕೊಂಡು ಅಭಿಮಾನಿಯೊಬ್ಬರು. ಇತ್ತೀಚಿಗೆ ನಿಧನ ಹಿನ್ನಲೆ ಉದ್ಯಮಿ ಸಿದ್ದಾರ್ಥ ಹೆಗ್ಡೆ ತವರು ಚಿಕ್ಕಮಗಳೂರಿನ ಜನರಂತೂ ತಮ್ಮ ಜಿಲ್ಲೆಗೆ ಕಿರೀಟದಂತಿದ್ದ ಕಾಫಿ ದಣಿಯನ್ನು ನೆನೆ ನೆನೆದು ಕಣ್ಣೀರಾಗುತ್ತಿದ್ದಾರೆ. ಜಿಲ್ಲೆಯ ಯುವಕನೊಬ್ಬ ಸಿದ್ದಾರ್ಥ ಅವರ ಮೇಲಿನ ಅಭಿಮಾನವನ್ನು ವಿಭಿನ್ನವಾಗಿ ತೋರಿಸಿಕೊಂಡಿದ್ದಾರೆ. ತಮ್ಮ ಕಾಫಿ ತೋಟಕ್ಕೆ ಅವರು ಸಿದ್ಧಾರ್ಥ ಅವರ ಸ್ಮರಣಾರ್ಥ ‘ ಸಿದ್ಧಾರ್ಥ ಬ್ಲಾಕ್’ ಎಂದು ಹೆಸರಿಟ್ಟಿದ್ದಾರೆ.

ಜಿಲ್ಲೆಯಾದ್ಯಂತ ಅಭಿಮಾನ : ಸಿದ್ದಾರ್ಥ ಮೇಲಿನ ಅಭಿಮಾನ ಜಿಲ್ಲೆಯಾದ್ಯಂತ ಪ್ರದರ್ಶಿತವಾಗುತ್ತಿದ್ದು, ಷೇರು ಮಾರುಕಟ್ಟೆಯಲ್ಲಿ ಪಾತಾಳ ಕಾಣುತ್ತಿರುವ ಕಾಫಿ ಡೇ ಷೇರು ರಕ್ಷಣೆಗೆ ‘ನಮ್ಮ ಕಾಫಿ ಡೇ ನಾನು ಸಿದ್ದಾರ್ಥ’ ಅಭಿಯಾನ ಆರಂಭಿಸಲಾಗಿರುವುದೇ ಇದಕ್ಕೆ ಸಾಕ್ಷಿ. ಕಾಫಿ ಡೇ ಷೇರು ಖರೀದಿಗೆ ಮಲೆನಾಡಿನ ಜನ ಮುಗಿಬಿದ್ದಿದ್ದು, ಶುಕ್ರವಾರ 99ರೂ. ಮುಖಬೆಲೆಯ ಷೇರುಗಳನ್ನು ನೂರಾರು ಜನ ಖರೀದಿಸಿದ್ದಾರೆ, ಕಾಫಿ ಡೇ ಷೇರುಗಳನ್ನು ರಕ್ಷಿಸುವ ಮೂಲಕ ವಿ.ಜಿ.ಸಿದ್ದಾರ್ಥ ಹೆಗ್ಡೆ ಕಟ್ಟಿದ್ದ ಕನಸಿನ ಕಾಫಿ ಡೇ ಉಳಿಸಿಕೊಳ್ಳಲು ಮುಂದಾಗಿದ್ದಾರೆ ಚಿಕ್ಕಮಗಳೂರಿನ ಜನರು.

ಫ್ರೆಶ್ ನ್ಯೂಸ್

Latest Posts

Featured Videos