‘ಕುಮಾರಸ್ವಾಮಿ’ ರಾಜೀನಾಮೆ ಇಂಗಿತಕ್ಕೆ ‘ನೋ’ ಎಂದ ರಾಹುಲ್ !

‘ಕುಮಾರಸ್ವಾಮಿ’ ರಾಜೀನಾಮೆ ಇಂಗಿತಕ್ಕೆ ‘ನೋ’ ಎಂದ ರಾಹುಲ್ !

ಬೆಂಗಳೂರು, ಮೇ. 24, ನ್ಯೂಸ್‍ ಎಕ್ಸ್ ಪ್ರೆಸ್‍: ರ್ನಾಟಕದಲ್ಲಿ ದೋಸ್ತಿ ಸರ್ಕಾರದ ನಾಯಕರು ಸೋತು ಸುಣ್ಣವಾಗಿದ್ದಾರೆ. ಮುಂದೆ ಸಿಎಂ ಕುಮಾರಸ್ವಾಮಿ ಸಿಎಂ ಆಗಿ ಮುಂದುವರೆಯಬೇಕೋ ಬೇಡವೋ? ಸೋಲಿಗೆ ಕಾರಣಗಳೇನು? ಒಂದು ವೇಳೆ ಅತೃಪ್ತ ನಾಯಕರು ಪಕ್ಷ ತೊರೆದ್ರೆ ಮುಂದೇನು ಮಾಡೋದು ಈ ಎಲ್ಲಾ ಗೊಂದಲಗಳು ದೋಸ್ತಿ ಸರ್ಕಾರದಲ್ಲಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ  ಸಿಎಂ ಕುಮಾರಸ್ವಾಮಿ ಕರೆದ ಅನೌಪಚಾರಿಕ ಶಾಸಕಾಂಗ ಸಂಪುಟ ಕರೆದಿದ್ರು. ಸಭೆಯಲ್ಲಿ  ಹಲವು ವಿಷಯಗಳ ಕುರಿತು ಸಮಾಲೋಚನೆ ಮಾಡಲಾಯ್ತು. ಸಭೆಯಲ್ಲಿ ಸಿಎಂ ಕುಮಾರಸ್ವಾಮಿ, ಆರ್‍.ವಿ ದೇಶಪಾಂಡೆ, ಪರಮೇಶ್ವರ್‍, ದಿನೇಶ್‍ ಗುಂಡೂರಾವ್‍, ಕೃಷ್ಣಭೈರೇಗೌಡ ಸೇರಿದಂತೆ ಜೆಡಿಎಸ್‍, ಕಾಂಗ್ರೆಸ್ ನ ಹಲವು  ನಾಯಕರು ಪಾಲ್ಗೊಂಡಿದ್ರು.

ಕುಮಾರಸ್ವಾಮಿಯೇ ಸಿಎಂ..!

ಸಭೆಯ ನಂತರ ಜಂಠಿ ಮಾಧ್ಯಮಗೋಷ್ಠಿ ನಡೆಸಿದ ದೋಸ್ತಿ ನಾಯಕರು, ಇನ್ನು ಐದು ವರ್ಷ ದೋಸ್ತಿ ಸರ್ಕಾರವೇ ಅಸ್ಥಿತ್ವದಲ್ಲಿರುತ್ತದೆ. ಕುಮಾರಸ್ವಾಮಿಯೇ ಸಿಎಂ ಆಗಿರುತ್ತಾರೆ ಎಂದರು. ಮಾಧ್ಯಮದವರು ಕಾಂಗ್ರೆಸ್‍ ನಿಂದ ಯಾರಾದ್ರೂ ಸಿಎಂ ಆಗ್ತಾರಾ?  ಡಿಕೆ ಶಿವಕುಮಾರ್‍ ಸಿಎಂ ಆಗ್ತಾರಾ ಎಂಬ ಪ್ರಶ್ನೆಗೆ ಪರಮೇಶ್ವರ್‍ ಡಿ.ಕೆ.ಶಿವಕುಮಾರ್‍ ಅವರನ್ನು ಪದೇ ಪದೇ ಯಾಕೆ ಎಳೆದು ತರ್ತೀರಿ. ಅವರು ಈ ದೇಶದಲ್ಲೇ ಇಲ್ಲ ಎಂದರು.

ಸಭೆಗೆ ಸಿದ್ದರಾಮಯ್ಯ ಗೈರು

ಇನ್ನು ಸಿಎಂ ಕುಮಾರಸ್ವಾಮಿ ಕರೆದ ಸಭೆಗೆ ದೋಸ್ತಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬಂದಿರಲಿಲ್ಲ. ಆದರೂ ಸಿದ್ದರಾಮಯ್ಯ ಸರ್ಕಾರ ಮುಂದುವರೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್‍ ತೀರ್ಮಾನಕ್ಕೆ ಬಿಡಿ. ಅವರು ಏನು ಹೇಳ್ತಾರೋ ಹಾಗೇ ಮುಂದಿನ ತೀರ್ಮಾನ ಕೈಗೊಳ್ಳೋಣ ಕಾಂಗ್ರೆಸ್‍ ನಾಯಕರಿಗೆ  ಎಂದು ಸಲಹೆ ನೀಡಿದ್ದರು ಎನ್ನಲಾಗಿದೆ.

ಸಿದ್ದು, ಕುಮಾರಸ್ವಾಮಿ ಕುಸ್ತಿ ಬಗ್ಗೆ ಚರ್ಚೆ

ದೋಸ್ತಿ ಸರ್ಕಾರದ ಅನೌಪಚಾರಿಕ ಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನಡುವಿನ ಒಳಜಗಳದ ಕುರಿತು ಚರ್ಚೆ ನಡೆಸಲಾಯ್ತು ಎನ್ನಲಾಗಿದೆ.  ಹೊರ ಜಗತ್ತಿಗೆ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ನಡುವೆ ಸರಿಯಿಲ್ಲ ಎಂಬ ಅಭಿಪ್ರಾಯ ಮೂಡಿದೆ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಒಟ್ಟಾಗಿ ಜನರ ಮುಂದೆ ಹೋಗಬೇಕಿದೆ. ಜಿಲ್ಲಾವಾರು, ಇಲಾಖಾವಾರು ಇಲಾಖೆಗಳತ್ತ ಗಮನಹರಿಸಬೇಕಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಹೆಚ್‍ಡಿಕೆ ರಾಜೀನಾಮೆ ಇಂಗಿತ?

ದೋಸ್ತಿಗಳ ಸಭೆಯಲ್ಲಿ ಹೆಚ್‍ಡಿ ಕುಮಾರಸ್ವಾಮಿ ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕುಮಾರಸ್ವಾಮಿ ಅಭಿಪ್ರಾಯವನ್ನು ಕಾಂಗ್ರೆಸ್ ನಾಯಕರು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಗೆ ತಿಳಿಸಿದ್ದಾರೆ. ಹೆಚ್‍ ಡಿಕೆ ರಾಜೀನಾಮೆ ಇಂಗಿತಕ್ಕೆ ರಾಹುಲ್ ಗಾಂಧಿ ಫೋನ್‍ನಲ್ಲಿ ನೀವೇ ಸಿಎಂ ಆಗಿ ಮುಂದುವರೆಯಿರಿ. ಹಾಗೇ ರಮೇಶ್‍ ಜಾರಕಿಹೊಳೆ ಅಸಮಾಧಾನವನ್ನು ಬೇಗ ಪರಿಹಿರಿಸಕೊಳ್ಳಿ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos