ನಾಳೆ ನೌಕರರ ಪ್ರತಿಭಟನೆ

ನಾಳೆ ನೌಕರರ ಪ್ರತಿಭಟನೆ

ಬೆಂಗಳೂರು, ಜು.2 : ಸಾರಿಗೆ ನಿಗಮಕ್ಕೆ ಕನಿಷ್ಟ 500 ಕೋಟಿ ರೂ ಗಳ ಸಂಕಷ್ಟ ಪರಿಹಾರ ಪ್ಯಾಕೇಜ ಸೇರಿದಂತೆ ವಿವಿಧ ಬೇಡಿಕೆಗಳನ್ನು‌ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಕ. ರಾ.ರಸ್ತೆ ಸಾ.ನಿಗಮ ನೌಕರರ ಫೆಡರೇಷನ್ (ಸಿಐಟಿಯು) ನಾಳೆ ಪ್ರತಿಭಟನೆ ನಡೆಸಲು ಮುಂದಾಗಿದೆ. ಕಚ್ಚಾ ತೈಲ ಬೆಲೆಗಳು ವಿಪರೀತವಾಗಿ ಕುಸಿದಿದೆ.  ಹದಿನೈದು ದಿನಗಳಲ್ಲಿ ಲೀ. ಡೀಸೆಲ್ ಬೆಲೆ 11 ರೂಗಳಷ್ಟು ಹೆಚ್ಚಳವಾಗಿದೆ. ಆದರಿಂದ ಸಾರಿಗೆ ನಿಗಮಗಳು ನಷ್ಟಕ್ಕೆ ಒಳಗಾಗಲಿವೆ.  ಅಂತರರಾಷ್ಟ್ರೀಯ ಬೆಲೆ ಕುಸಿತದ ಲಾಭ ಸಾರ್ವಜನಿಕ ಸಾರಿಗೆಗೆ ವರ್ಗಾವಣೆ ಮಾಡಬೇಕು. ಡೀಸೆಲ್ ಮೇಲಿನ ತೆರಿಗೆ ರದ್ದು ಮಾಡಿ ರಿಯಾಯಿತಿ ದರದಲ್ಲಿ ನಿಗಮಗಳಿಗೆ ಡೀಸೆಲ್ ಒದಗಿಸಬೇಕು ಎಂಬ ಬೇಡಿಕೆಗಳನ್ನು ಸರ್ಕಾರದ‌ ಮುಂದಿಟ್ಟಿದೆ.

ಸಾರಿಗೆ ಸಿಬ್ಬಂದಿಗೆ, ವಿಶೇಷವಾಗಿ ಚಾಲಕರು, ನಿರ್ವಾಹಕರು, ತಾಂತ್ರಿಕ ಮತ್ತು ಆಡಳಿತ ಸಿಬ್ಬಂದಿಗೆ ಅತ್ಯುತ್ತಮ ಗುಣಮಟ್ಟದ ಆರೋಗ್ಯ ಸುರಕ್ಷತಾ ಉಪಕರಣಗಳು, ಸ್ಯಾನಿಟೈಸರ್‌, ಮುಖಗವಸು, ಕೈಗವಸು ಇತ್ಯಾದಿಗಳನ್ನು ಕಡ್ಡಾಯವಾಗಿ ಒದಗಿಸಬೇಕು.

 

 

ಫ್ರೆಶ್ ನ್ಯೂಸ್

Latest Posts

Featured Videos