‘ಚುಟು ಚುಟು’ ಬೆಡಗಿಯ ಹೊಸ ಲುಕ್

‘ಚುಟು ಚುಟು’ ಬೆಡಗಿಯ ಹೊಸ ಲುಕ್

ಬೆಂಗಳೂರು, ಏ. 23, ನ್ಯೂಸ್ ಎಕ್ಸ್ ಪ್ರೆಸ್: ಚಿತ್ರರಂಗದ  ನಟಿಯರು ಅಂದ್ಮೇಲೆ ತಮ್ಮ ಹೊಸ ಚಿತ್ರಕ್ಕಾಗಿಯೋ, ಇಲ್ಲಾ ಹೊಸ ಚಿತ್ರಗಳಲ್ಲಿ  ಅವಕಾಶಕ್ಕಾಗಿಯೋ ಅವಾಗಾವಾಗ ಫೋಟೋ ಶೂಟ್ ಮಾಡಿಸೋದು ಸಹಜ . ಸದ್ಯ ಸ್ಯಾಂಡಲ್ ವುಡ್ ಪೈಕಿ ಹಲವು ಚೆಲುವೆಯರು ಫೋಟೋ ಶೂಟ್ ಮಾಡಿಸುತಿದ್ದ, ಬಹುಬೇಡಿಕೆ ನಟಿ ‘ಚುಟು ಚುಟು’ ಖ್ಯಾತಿಯ ಆಶಿಕಾ ರಂಗನಾಥ್ ಸಹ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ಸದ್ಯ ಅಷ್ಟೇನು ಬೋಲ್ಡ್ ಆಗಿ ತೆರೆ ಮೇಲೆ ಬರದ ಈ ನಟಿ ಕ್ಯೂಟ್ ಕ್ಯೂಟ್ ಆಗಿಯೇ ಕನ್ನಡಿಗರ ಮನಸ್ಸು ಕದ್ದವರು. ಆದರೆ, ದೀಗ ಕೊಂಚ ಬೋಲ್ಡ್ ಆಗಿಯೇ ಕ್ಯಾಮೆರಾಗೆ ಪೋಸ್ ಕೊಟ್ಟಿರೋದು ಪಡ್ಡೆಹುಡುಗರ ಮನಸ್ಸಿಗೆ ಗಾಳ ಹಾಕಿದಂತಾಗಿದೆ. ಒಂದೆಡೆ ಗೌನ್ ನಲ್ಲಿ ಕ್ಲಾಸಿಯಾಗಿ ಕಾಣಿಸಿಕೊಂಡರೆ ಮತ್ತೊಂದೆಡೆಡ ಬ್ಯಾಕ್ ಲೆಸ್ ಮಿನಿ ಸ್ಕರ್ಟ್ ನಲ್ಲಿ ಆಶಿಕಾ ಸಖತ್ತಾಗಿ ಕಾಣುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos