ವಿಶ್ವ ಆರ್ಥಿಕತೆಗೆ ‘ಚೀನಾ ಸಾಲ ನೀತಿ’ ಮಾರಕ: ಐಎಂಎಫ್

ವಿಶ್ವ ಆರ್ಥಿಕತೆಗೆ ‘ಚೀನಾ ಸಾಲ ನೀತಿ’ ಮಾರಕ: ಐಎಂಎಫ್

ವಾಷಿಂಗ್ಟನ್, ಏ. 17, ನ್ಯೂಸ್ ಎಕ್ಸ್ ಪ್ರೆಸ್: ಕೆಲವೊಂದು ವಾಣಿಜ್ಯ ಮತ್ತು ತಂತ್ರಜ್ಞಾನ ಆವಿಷ್ಕಾರಗಳಿಂದ ಆಗಿರುವ ಕೆಟ್ಟ ಪರಿಣಾಮಗಳನ್ನು ಗಂಭೀರವಾಗಿ ಪರಿಗಣಿಸಿ ನಾವೇ ಬಗೆಹರಿಸಬೇಕಾಗಿದೆ: ಐಎಂಎಫ್​ ಮುಖ್ಯಸ್ಥೆ ಕ್ರಿಸ್ಟೀನ್ ಲಗಾರ್ಡ್‌ ಜಾಗತಿಕ ಆರ್ಥಿಕತೆ ಕ್ಷೀಣಿಸುತ್ತಿರುವ ಪ್ರಸ್ತುತ ದಿನಗಳಲ್ಲಿ ಯಾವುದೇ ಹಾನಿಯಾಗದಂತಹ ಉತ್ತಮ ವಾಣಿಜ್ಯ ನೀತಿಗಳನ್ನು ರೂಪಿಸುವ ಮೂಲಕ ಕೆಟ್ಟ ವಾಣಿಜ್ಯ ನೀತಿಗಳಿಗೆ ಕೊನೆ ಹಾಡಬೇಕು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್​) ಕರೆ ನೀಡಿದೆ. ಐಎಂಎಫ್​ ಮತ್ತು ವಿಶ್ವ ಬ್ಯಾಂಕ್ ಸಭೆಯಲ್ಲಿ ಮಾತನಾಡಿದ ಐಎಂಎಫ್​ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟೀನ್ ಲಗಾರ್ಡ್​, ಹಲವು ದಶಕಗಳಿಂದ ಉತ್ಪಾದಕತೆ, ಆವಿಷ್ಕಾರ, ಪ್ರಗತಿ, ಉದ್ಯೋಗ ಪ್ರಮಾಣ ವೃದ್ಧಿಗೆ ವಾಣಿಜ್ಯ ಐಕ್ಯತೆ ನೆರವಾಗಿದೆ. ಅಲ್ಲದೆ, ಕಡಿಮೆ ಆದಾಯ ವರ್ಗದ ಜನರಿಗೆ ಜೀವನ ವೆಚ್ಚವು ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ವಾಣಿಜ್ಯ ವಲಯದ ಲಾಭಗಳಿಂದ ವಂಚಿತವಾಗಿರುವ ಬಗ್ಗೆ ಹೆಚ್ಚು ಗಮನಕೊಡಬೇಕಿದೆ. ಎಲ್ಲ ದೇಶಗಳ ಮಾರಕ ವಾಣಿಜ್ಯ ಪದ್ದತಿಗಳಿಗೆ ತಿಲಾಂಜಲಿ ಹಾಡಬೇಕು. ವಿಶ್ವ ವಾಣಿಜ್ಯ ಒಕ್ಕೂಟ ವ್ಯವಸ್ಥೆಯ ಸುಧಾರಣೆಯನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಆರ್ಥಿಕ ದಿಗ್ಬಂಧನ ಮತ್ತು ಇತರ ನಿರ್ಬಂಧಗಳಿಂದ ಜಾಗತಿಕ ವಾಣಿಜ್ಯ ವಹಿವಾಟಿಗೆ ತೀವ್ರ ಧಕ್ಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಗಳು ಈ ವಿಷಯಗಳಲ್ಲಿ ಎಚ್ಚರಿಕೆಯ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಅಂತಾರಾಷ್ಟ್ರೀಯ ಸಾಲ ನೀಡಿಕೆಯ ನಿಯಮಗಳನ್ನು ಅನುಸರಿಸದೆ ಸಾಲ ನೀಡಿಕೆಯ ಪ್ರಮಾಣ ಹೆಚ್ಚಾಗುತ್ತಿದೆ. ದೇಶಗಳು ಭವಿಷ್ಯದಲ್ಲಿ ಸಾಲ ತೀರಿಸುವ ಪ್ರಯತ್ನದ ಬಗ್ಗೆ ಚಿಂತಿಸುತ್ತಿಲ್ಲ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಚೀನಾದ ಸಾಲ ನೀಡುವ ಪ್ರಮಾಣವು ಹೆಚ್ಚಾಗುತ್ತಿದೆ. ಸಾಲದ ಹೊರೆಯು ಮುಂದೆ ಕಳವಳಕಾರಿ ಬಿಕ್ಕಟ್ಟುಗಳಿಗೆ ಬೀಜವಾಗಬಹುದು ಎಂದು ಚೀನಾಗೆ ಎಚ್ಚರಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos