ಚೀನಾ; ಕೀಟನಾಶಕ ಕಾರ್ಖಾನೆ ಸ್ಫೋಟಗೊಂಡು 47 ಮಂದಿ ಸಾವು

ಚೀನಾ; ಕೀಟನಾಶಕ ಕಾರ್ಖಾನೆ ಸ್ಫೋಟಗೊಂಡು 47 ಮಂದಿ ಸಾವು

ಶಾಂಘೈ, ಮಾ.22, ನ್ಯೂಸ್ ಎಕ್ಸ್ ಪ್ರೆಸ್: ಪಶ್ಚಿಮ ಚೀನಾದ ಚೆನ್ಜಿಗಾಂಗ್ ಕೈಗಾರಿಕಾ ಪ್ರಾಂಗಣದಲ್ಲಿರುವ ಕೀಟ ನಾಶಕ ತಯಾರಿಕಾ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿದ ಪರಿಣಾಮವಾಗಿ 47 ಮಂದಿ ಮೃತಪಟ್ಟು , 600ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ಗುರುವಾರ ನಡೆದಿದೆ.

ಟೆಯಾನ್ಜೈ ಕೆಮಿಕಲ್ ಸಂಸ್ಥೆಗೆ ಸೇರಿದ ಘಟಕದಲ್ಲಿ ಸ್ಫೋಟ ಸಂಭವಿಸಿ, ಬೆಂಕಿ ಹತ್ತಿಕೊಂಡಿದ್ದು, . ಸಮೀಪದ ಕಾರ್ಖಾನೆಗಳಿಗೂ ಬೆಂಕಿ ವ್ಯಾಪಿಸಿದೆ ಎಂದು ತಿಳಿದು ಬಂದಿದೆ. ಈ ಘಟನೆಯಲ್ಲಿ ಗಾಯಗೊಂಡಿರುವ 640ಕ್ಕೂ ಅಧಿಕ ಮಂದಿಗೆ 16 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos