ಮಂಡ್ಯಕ್ಕೆ ಹೆಚ್ ಡಿ ಕೆ ಕೊಡುಗೆ ಶೂನ್ಯ: ಸಚಿವ ಚಲುವರಾಯಸ್ವಾಮಿ

ಮಂಡ್ಯಕ್ಕೆ ಹೆಚ್ ಡಿ ಕೆ ಕೊಡುಗೆ ಶೂನ್ಯ: ಸಚಿವ ಚಲುವರಾಯಸ್ವಾಮಿ

ಮಂಡ್ಯ: ರಾಜ್ಯದಲ್ಲಿ ಲೋಕಸಭಾ ಚುನಾವಣೆ ರಂಗೇರಿದ್ದು ರಾಜ್ಯದಲ್ಲಿ ಅಭ್ಯರ್ಥಿಗಳು ಭರ್ಜರಿ ಮತಬೇಟೆಯಾಚಿಸುತ್ತಾರೆ. ಮಂಡ್ಯ ಲೋಕಸಭೆಯಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಎಚ್ ಡಿ ಕುಮಾರಸ್ವಾಮಿ ಅವರು ಸ್ಪರ್ಧಿಸುತ್ತಿದ್ದಾರೆ ಅವರ ವಿರುದ್ಧವಾಗಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಜನರು ಅವರು ಸ್ಪರ್ಧಿಸುತ್ತಿದ್ದಾರೆ.

ಮಂಡ್ಯಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕೊಡುಗೆ ಶೂನ್ಯ. ಮುಖ್ಯಮಂತ್ರಿಯಾಗಿದ್ದಾಗಲೇ ಮಂಡ್ಯ ಅಭಿವೃದ್ದಿ ಮಾಡದವರು ಸಂಸದರಾಗಿ ಹೇಗೆ ಅಭಿವೃದ್ದಿ ಮಾಡುತ್ತಾರೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.

ಮಂಡ್ಯದಲ್ಲಿ ನಿನ್ನೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಮಂಡ್ಯ ಸಮಾವೇಶದಲ್ಲಿ 70 ರಿಂದ 80 ಸಾವಿರ ಜನ ಬಂದಿದ್ದರು. ನಮ್ಮ ಅಭ್ಯರ್ಥಿ ಸ್ಟಾರ ಚಂದ್ರು ಗೆಲ್ಲಿಸಲು ಜನ ಬಂದಿದ್ದರು ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಮೇಲೆ ಭರವಸೆಯಿಟ್ಟು  136 ಸ್ಥಾನನವನ್ನ ಜನತೆ ಗೆಲ್ಲಿಸಿದ್ದರು. ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಜಾರಿ ಮಾಡಿದ್ದೇವೆ ಎಂದರು.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ ನಿಶ್ಚಿತ.  ಕಾವೇರಿ ವಿಚಾರದಲ್ಲಿ ಹೆಚ್.ಡಿ ಕುಮಾರಸ್ವಾಮಿ  ತಮಾಷೆಯಾಗಿ ಮಾತನಾಡುತ್ತಾರೆ. ಈ ಹಿಂದೆ ಹೇಳಿದಂತೆ ಕುಮಾರಸ್ವಾಮಿ ಜೆಡಿಎಸ್ ವಿಸರ್ಜನೆ ಮಾಡಲಿ.  ಮಂಡ್ಯ ಜಿಲ್ಲೆಗೆ ಹೆಚ್.ಡಿ ಕುಮಾರಸ್ವಾಮಿ ಕೊಡುಗೆ ಝೀರೋ.  ಸಿಎಂ ಆದಾಗ ಯಾವ ಯೋಜನೆ ಘೋಷಣೆ ಮಾಡಿದ್ದಾರೆಂದು ತೋರಿಸಲಿ ಎಂದು ಸವಾಲು ಹಾಕಿದರು.

ಫ್ರೆಶ್ ನ್ಯೂಸ್

Latest Posts

Featured Videos