ಬೆಕ್ಕನ್ನು ಅಟ್ಟಿಸಿಕೊಂಡು ಹೋದ ಶ್ವಾನ

ಬೆಕ್ಕನ್ನು ಅಟ್ಟಿಸಿಕೊಂಡು ಹೋದ ಶ್ವಾನ

ಕ್ಯಾಲಿಫೋರ್ನಿಯಾ, ಡಿ. 19 : ಬೆಕ್ಕೊಂದನ್ನು ಬೆನ್ನಟ್ಟಿಕೊಂಡು ಹೋದ ಜರ್ಮನ್ ಶೆಫರ್ಡ್ ನಾಯಿಯ ರಕ್ಷಣೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಹೋದ ವಿಚಿತ್ರ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.
ನಾಯಿ ಬೆನ್ನಟ್ಟಿ ಬರುತ್ತಿರುವುದನ್ನು ನೋಡಿದ ಬೆಕ್ಕು ಓಡಿಓಡಿ ಕೊನೆಗೆ ಮರವೊಂದನ್ನು ಏರಿತು. ಅದರ ಹಿಂದೆ ಹೋದ ನಾಯಿ ಬೆಕ್ಕನ್ನು ಹೇಗಾದರೂ ಹಿಡಿಯಲೇಬೇಕು ಎಂದು ಹುಚ್ಚು ಆವೇಶದಿಂದ ತಾನೂ ಮರವನ್ನು ಏರಿಯೇಬಿಟ್ಟಿತು. ಆದರೆ ಆ ಮರದ ತುದಿಯ ಟೊಂಗೆಯೊಂದರ ಮೇಲೆ ನಿಂತ ಶ್ವಾನ ಮುಂದೆ ಹೋಗಲಾಗದೆ, ಕೆಳಗೆ ಇಳಿಯಲೂ ಸಾಧ್ಯವಾಗದೆ ಕಂಗಾಲಾಗಿ ಪರದಾಡಬೇಕಾಯಿತು.
ಬಳಿಕ ಯಾರಿಂದಲೋ ಮಾಹಿತಿ ಪಡೆದ ಲ್ಯಾಥ್ರಾಪ್ ಮಾಂಟೆಕಾ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ, ಮರಕ್ಕೆ ಏಣಿ ಹಾಕಿ ಆ ನಾಯಿಯನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos