ಹಬ್ಬದ ಹಿನ್ನೆಲೆ ಮಾರುಕಟ್ಟೆಯಲ್ಲಿ ಖರೀದಿ ಜೋರು!

ಹಬ್ಬದ ಹಿನ್ನೆಲೆ ಮಾರುಕಟ್ಟೆಯಲ್ಲಿ ಖರೀದಿ ಜೋರು!

ಬೆಂಗಳೂರು: ದೇಶಾದ್ಯಾಂತ ವರಲಮಹಾಲಕ್ಷ್ಮೀ ಪೂಜೆಯನ್ನು ವಿಜೃಂಭಣೆಯಿಂದ ಶುಕ್ರವಾರ ಆಚರಣೆ ಮಾಡಲಾಗುತ್ತದೆ. ನಾಳೆ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಮಾರುಕಟ್ಟೆಗಳಲ್ಲಿ ಜನರ ಖರೀದಿ ಭರಾಟೆಯೂ ಹೆಚ್ಚಾಗಿದೆ. ಹಾಗಾಗಿ ಹೂವು, ಹಣ್ಣು ಹಾಗೂ ಇತರೆ ಪೂಜಾ ಸಾಮಗ್ರಿಗಳ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಉಂಟಾಗಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬೆನ್ನಲ್ಲೇ ಜೇಬು ಸುಟ್ಟುಕೊಂಡಿರುವ ಜನಸಾಮಾನ್ಯರಿಗೆ ವರಮಹಾಲಕ್ಷ್ಮೀ ಹಬ್ಬದ ವೇಳೆ ಎಲ್ಲ ಪೂಜಾ ಸಾಮಗ್ರಿಗಳ ದರವೂ ಕೂಡ ಹೆಚ್ಚಳವಾಗಿದ್ದು, ಜನಸಾಮಾನ್ಯರ ಜೇಬಿಗೆ ಮತ್ತಷ್ಟು ಕತ್ತರಿ ಬೀಳುವುದಂತೂ ಖಚಿತವಾಗಿದೆ.
ಹಬ್ಬಕ್ಕೆ ಬಜೆಟ್ ನೊಡಿಕೊಂಡು ಖರೀದಿಗೆ ಮುಂದಾದ ಜನ. ಆದರೂ, ದುಬಾರಿ ಮಧ್ಯೆಯೂ ಖರೀದಿ ಭರಾಟೆಗೆ ಮಾತ್ರ ಹೆಚ್ಚಿನ ಹೊಡೆತ ಬಿದ್ದಿಲ್ಲ. ನಾಳಿನ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿ ಜೋರಾಗಿದ್ದೆ. ಇನ್ನು ವರಮಹಾಲಕ್ಷ್ಮಿ ಪೂಜೆಗೆ ಧನಲಕ್ಷ್ಮಿ ಕೃಪಾಕಟಾಕ್ಷವೂ ಹೆಚ್ಚು ಬೇಕಾಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos