ಕೇಂದ್ರ ಬಜೆಟ್‌ ಮಂಡನೆ

ಕೇಂದ್ರ ಬಜೆಟ್‌ ಮಂಡನೆ

ನವದೆಹಲಿ: ಇಂದು 11 ಗಂಟೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಮಧ್ಯಂತರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಎಷ್ಟು ಹಣ ಸಿಗಲಿದೆ ಎಂದು ಕುತುಹಲಕಾರಿಯಾಗಿದೆ. ಲೋಕಸಭೆ ಚುನಾವಣೆಗೆ ಮೊದಲು ಮಂಡನೆಯಾಗುವ ಬಜೆಟ್‌ ಇದಾಗಿದ್ದು, ಭಾರತದ ಅಭಿವೃದ್ಧಿಗೆ ಭವಿಷ್ಯದ ನೀತಿ ನಿರೂಪಣೆಯ ಅಂಶವೂ ಇರಲಿದೆ. ಐದು ಪೂರ್ಣ ಬಜೆಟ್ ಮತ್ತು ಈ ದಿನ ಮಂಡಿಸಲಿರುವ ಮಧ್ಯಂತರ ಬಜೆಟ್‌ ಸೇರಿ ಅವರು ಮಂಡಿಸುತ್ತಿರುವ 6ನೇ ಕೇಂದ್ರ ಬಜೆಟ್ ಇದಾಗಿದೆ.

ಈ ಮಧ್ಯಂತರ ಬಜೆಟ್‌ ಭಾರತದ ಅರ್ಥ ವ್ಯವಸ್ಥೆಯ ರಚನಾತ್ಮಕ ಸಮಸ್ಯೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಮಹತ್ವ  ಪಡೆಯುತ್ತದೆ. ಅದೇ ರೀತಿ, ಕೇಂದ್ರ ಸರ್ಕಾರವು ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುವ ಮೂಲಕ ಮಧ್ಯಮ ಅವಧಿಯ ನಿರಂತರ ಬೆಳವಣಿಗೆಗೆ ಹೇಗೆ ವೇದಿಕೆಯನ್ನು ಸಿದ್ಧಪಡಿಸಿದೆ ಎಂಬ ಚಿತ್ರಣವನ್ನು ನೀಡುವ ಸಾಧ್ಯತೆ ಇದೆ.

ಕೇಂದ್ರ ಬಜೆಟ್ ತಯಾರಿಕೆ ಪ್ರಕ್ರಿಯೆಯಲ್ಲಿ ತೊಡಗಿದ ಇಬ್ಬರು ನೀಡಿರುವ ಮಾಹಿತಿ ಪ್ರಕಾರ, ಬಿಜೆಪಿ ನೇತೃತ್ವದ ನ್ಯಾ‍ಷನಲ್ ಡೆಮಾಕ್ರಟಿಕ್ ಅಲಯನ್ಸ್ ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯಲು ಬಯಸಿದೆ. ಹೀಗಾಗಿ ಈ ಸಲದ ಬಜೆಟ್‌ನಲ್ಲಿ ಸರ್ಕಾರದ ನೀತಿ ನಿರೂಪಣೆಯ ಆದ್ಯತಾ ಪಟ್ಟಿಯನ್ನು ಅದು ಸೇರಿಸಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸೋದರ ತಾಣ ದ ಲೈವ್ ಮಿಂಟ್ ವರದಿ ಮಾಡಿದೆ.

ಇಂದು  ಮಂಡನೆಯಾಗಲಿರುವ ಕೇಂದ್ರ ಬಜೆಟ್‌ನಲ್ಲಿ ಕೌಶಲ್ಯ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಹೂಡಿಕೆ ಇರಲಿದೆ. ಅದೇ ರೀತಿ, ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶ, ಹಿಂದುಳಿದ ಜಿಲ್ಲೆಗಳನ್ನು ಮುಖ್ಯವಾಹಿನಿಗೆ ತರುವುದು ಸೇರಿ ಹಲವು ವಿಚಾರಗಳು ಆದ್ಯತಾ ವಲಯದಲ್ಲಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos