ರಾಜ್ಯ ಹಾಗೂ ರಾಷ್ಟ್ರದ ಅಭಿವೃದ್ದಿಗೆ ಮಾರಕಗೊಂಡ ಬಜೆಟ್

ರಾಜ್ಯ ಹಾಗೂ ರಾಷ್ಟ್ರದ ಅಭಿವೃದ್ದಿಗೆ ಮಾರಕಗೊಂಡ ಬಜೆಟ್

ಬೆಂಗಳೂರು, ಮಾ. 06: ರಾಜ್ಯ ಬಿಜೆಪಿ ಸರ್ಕಾರ ಮಂಡಿಸಿರುವ ಬಜೆಟ್ ಹಾಗೂ ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ರಾಜ್ಯದ ಅಭಿವೃದ್ಧಿಗೆ ಹಾಗೂ ರಾಷ್ಟ್ರದ ಅಭಿವೃದ್ದಿಗೆ ಮಾರಕಗೊಂಡ ಬಜೆಟ್ ಆಗಿದೆ .

ಕೇಂದ್ರ ಸರ್ಕಾರ ದಿನನಿತ್ಯ ಅಗತ್ಯ ವಸ್ತುಗಳ ಬೆಲೆ ಹಾಗೂ ಡೀಸೆಲ್ ಪೆಟ್ರೋಲ್ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡುತ್ತಿದೆ ಅದರಂತೆ ರಾಜ್ಯ ಸರ್ಕಾರವೂ ಸಹ ಈ ಬಜೆಟ್ ನಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯ ತೆರಿಗೆಯನ್ನ ಏರಿಸುವ ಮೂಲಕ ರಾಜ್ಯದ ಜನತೆಗೆ ದ್ರೋಹ ಎಸಗಿದೆ.

ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಅನುದಾನ ಹಾಗೂ GST ಮೂಲಕ ಒದಗಿಸಬೇಕಾದ ಹಣವನ್ನು ಕಡಿತಗೊಳಿಸಿ 11.837 ಸಾವಿರ ಕೋಟಿ ಹಣವನ್ನ ನೀಡದೇ ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿದೆ, ಕರ್ನಾಟಕ ರಾಜ್ಯದಿಂದ ಬಿಜೆಪಿಯ 25  ಮಂದಿ ಸಂಸದರು ಆಯ್ಕೆಯಾಗಿದ್ದಾರೆ ಹಾಗೂ 3-4 ಮಂದಿ ಸಚಿವರು ಆದರೂ ಸಹ ಕೇಂದ್ರ ಸರ್ಕಾರಕ್ಕೆ ಒತ್ತಡ ತರದೇ ರಾಜ್ಯಕ್ಕೆ ದೊರಕಬೇಕಾದ ಅನುದಾನವನ್ನು ನೀಡದೇ ಇರುವುದರ ವಿರುದ್ದ ಯಾವುದೇ ಸಂಸದರು ಧ್ವನಿ ಎತ್ತದೇ ಸಂಸತ್ತಿನಲ್ಲಿ ನಿದ್ರಿಸುತ್ತಿದ್ದಾರೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿರುವುದನ್ನು ಬಹಿರಂಗ ಪಡಿಸಿದ್ದಾರೆ.

ಒಂದು ಕಡೆ ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಹಣವನ್ನು ಕಡಿತಗೊಳಿಸಿದರೆ ಇತ್ತಕಡೆ ರಾಜ್ಯ ಸರ್ಕಾರ ಸಾಲದ ಹೊರೆಯನ್ನು ಹೆಚ್ಚಿಸಿಕೊಂಡಿದೆ ಹಾಗೂ ಇದು ರಾಜ್ಯದ ಜನರಿಗೆ ಹಾಗೂ ಕರ್ನಾಟಕದ ಅಭಿವೃದ್ಧಿಗೆ ಮಾರಕವಾಗಿದೆ. ಕೇಂದ್ರ ಹಾಗು ರಾಜ್ಯ ಸರ್ಕಾರ ರಾಜ್ಯದ ನೆರೆ ಸಂತ್ರಸ್ತರ ಬಗ್ಗೆ ಕಿಂಚಿತ್ತು ಕಾಳಜಿ ವಹಿಸದೆ ಪ್ರಸ್ತುತ ಬಜೆಟ್ ನಲ್ಲಿ ನೆರೆ ಸಂತಸ್ತರಿಗೆ ಪರಿಹಾರ ಘೋಷಿಸದೆ ನೆರೆ ಸಂತ್ರಸ್ತರನ್ನು ನಿರ್ಲಕ್ಷಿಸಿದೆ.

ಇದು ರಾಜ್ಯದ ನೆರೆ ಸಂತ್ರಸ್ತರಿಗೆ ಬಗೆದ ದ್ರೋಹವಾಗಿದೆ ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಬೆಲೆ ಏರಿಕೆ ಮಾಡುವುದು ಗೊತ್ತಿದೆ ಹೊರತು ರಾಷ್ಟ್ರದ ಅಭಿವೃದ್ಧಿಗೆ ಹಾಗೂ ಆರ್ಥಿಕ ಸುಧಾರಣೆಗೆ ಯಾವುದೇ ರೀತಿಯ ಯೋಜನೆಗಳನ್ನು ರೂಪಿಸಿಕೊಂಡಿಲ್ಲ ಆದ್ದರಿಂದ ಇದು ಜನವಿರೋಧಿ ಬಜೆಟ್ ಆಗಿ ರೂಪುಗೊಂಡಿದೆ ಆದ್ದರಿಂದ ಈ ಜನವಿರೋಧಿ ಬಜೆಟ್ ನ್ನು ಖಂಡಿಸಿ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಪ್ರತಿಭಟನೆ  ನಡೆಸಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕವಿಕಾ ಮಾಜಿ ಅಧ್ಯಕ್ಷರಾದ ಎಸ್ ಮನೋಹರ್, ಜಿ ಜನಾರ್ಧನ್, ಎ ಆನಂದ್, ಇ ಶೇಖರ್, ಶ್ರೀಧರ್, ಉಮೇಶ್, ಪುಟ್ಟರಾಜು, ಶ್ರೀಮತಿ ಆಶಾರಾಜ್,  ಶ್ರೀಮತಿ ಲಕ್ಷ್ಮಿಮೂರ್ತಿ, ಶ್ರೀಮತಿ ಶೀಲಮ್ಮ, ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos