ಗಣೇಶೋತ್ಸವ: ಭಾಯ್ಜಾನ್ ಸಖತ್ ಸ್ಟೆಪ್ಸ್

ಗಣೇಶೋತ್ಸವ: ಭಾಯ್ಜಾನ್ ಸಖತ್ ಸ್ಟೆಪ್ಸ್

ಮುಂಬೈ, ಆ. 4 : ಭಾಯ್ಜಾನ್ ಸಲ್ಮಾನ್ ಖಾನ್ ಗಣೇಶೋತ್ಸವದಲ್ಲಿ ಡೋಲು ಸದ್ದಿಗೆ ಭರ್ಜರಿ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ತಮ್ಮ ಸಹೋದರಿ ಅರ್ಪಿತಾ ಖಾನ್ ಮನೆಯಲ್ಲಿ ನಡೆದ ಗಣೇಶ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಗಣೇಶ ವಿಸರ್ಜನೆ ಸಮಯದಲ್ಲಿ ಡೋಲು ಸದ್ದಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಈ ವೇಳೆ ಸಲ್ಮಾನ್ ಅವರಿಗೆ ನಟಿಯರು ಸಾಥ್ ನೀಡಿದ್ದರು
ನಟಿ ಸ್ವರಾ ಭಾಸ್ಕರ್, ಡೇಸಿ ಶಾ ಸಲ್ಮಾನ್ ಖಾನ್ ಅವರ ಜೊತೆ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಅರ್ಪಿತಾ ಅವರ ಮನೆಯ ಗಣೇಶ ಪೂಜೆಯಲ್ಲಿ ಇಡೀ ಖಾನ್ ಕುಟುಂಬಸ್ಥರು ಭಾಗವಹಿಸಿದ್ದರು.
ಅರ್ಪಿತಾ ಅವರ ಮನೆಯಲ್ಲಿ ನಡೆದ ಪೂಜೆಯ ಫೋಟೋ ಹಾಗೂ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋವೊಂದರಲ್ಲಿ ನಟಿ ನೇಹಾ ದುಪಿಯಾ ಹಾಗೂ ಅವರ ಪತಿ ಅಂಗದ್ ಬೇಡಿ ಪೂಜೆ ಮಾಡಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಸಲ್ಮಾನ್ ಡೈಸಿ ಶಾ ಹಾಗೂ ಸ್ವರಾ ಭಾಸ್ಕರ್ ಅವರ ಜೊತೆ ಡೋಲು ಸದ್ದಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos