ಕಟ್ಟಿಕೊಂಡ ಮೂಗಿನಿಂದ ಉಸಿರಾಡಲು ಕಷ್ಟವಾಗುತ್ತಿದೆಯಾ…? ಇದನ್ಮೊಮ್ಮೆ ಪ್ರಯತ್ನಿಸಿ

ಕಟ್ಟಿಕೊಂಡ ಮೂಗಿನಿಂದ ಉಸಿರಾಡಲು ಕಷ್ಟವಾಗುತ್ತಿದೆಯಾ…? ಇದನ್ಮೊಮ್ಮೆ ಪ್ರಯತ್ನಿಸಿ

ಬೆಂಗಳೂರು : ಸಾಮಾನ್ಯವಾಗಿ ಶೀತ ಆದರೆ ಉಸಿರಾಡಲು ಕಷ್ಟವಾಗುತ್ತದೆ. ಆದರೆ ಕೆಲವರಿಗೆ ಪದೇ ಪದೇ ಮೂಗು ಕಟ್ಟಿಕೊಂಡು ಉಸಿರಾಡಲು ಆಗುವುದಿಲ್ಲ. ಹಾಗೇ ಅಸ್ತಮಾ ರೋಗಿಗಳಿಗೂ ಕೂಡ ಈ ತೊಂದರೆ ಇರುತ್ತದೆ. ಅಂತವರು ಈ ಟೀಯನ್ನು ಪ್ರತಿದಿನ 2 ಬಾರಿ ಕುಡಿಯುವುದರಿಂದ ಈ  ಉಸಿರಾಟದ ಸಮಸ್ಯೆ ಕಡಿಮೆಯಾಗುತ್ತದೆ.
ಟೀ ಮಾಡುವ ವಿಧಾನ: 250  ಮಿ.ಲೀ.ನಷ್ಟು ಕುದಿಯುವ ನೀರಿಗೆ 10-12 ತುಳಸಿ ಎಲೆಗಳು, ಕಾಳುಮೆಣಸು 5-6, ಹಸಿಶುಂಠಿ 2-5 ಗ್ರಾಂ ಈ ಮೂರನ್ನು ಚೆನ್ನಾಗಿ ಜಜ್ಜಿ ಹಾಕಿ 5-10 ನಿಮಿಷ ಕುದಿಸಿ ನಂತರ ಸೋಸಿ ನಂತರ ಅದಕ್ಕೆ 1 ಟೀ ಚಮಚ ಹಳೆಬೆಲ್ಲವನ್ನು ಹಾಕಿ ಮಿಕ್ಸ್ ಮಾಡಿ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರು ಕುಡಿದ ನಂತರ ಈ ಟೀ ಕುಡಿಯಿರಿ. ಹಾಗೇ ಸಂಜೆ ಕುಡಿಯಬೇಕು. ಇದರಿಂದ ಉಸಿರಾಟದ ಸಮಸ್ಯೆ ದೂರವಾಗುವುದರ ಜೊತೆಗೆ ಶೀತ, ಕೆಮ್ಮು, ಡಸ್ಟ್ ಅಲರ್ಜಿ ಕೂಡ ಕಡಿಮೆಯಾಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos