ಚಾರ್ಚಿಂಗ್ ಸಮಯದಲ್ಲಿ ವಿಡಿಯೋ ಕಾಲ್ ಮಾಡುವಾಗ ಸ್ಫೋಟ!

ಚಾರ್ಚಿಂಗ್ ಸಮಯದಲ್ಲಿ ವಿಡಿಯೋ ಕಾಲ್ ಮಾಡುವಾಗ ಸ್ಫೋಟ!

ಬೆಂಗಳೂರು, ಮೇ.2, ನ್ಯೂಸ್ ಎಕ್ಸ್ ಪ್ರೆಸ್: ಮೊಬೈಲ್ ಚಾರ್ಜ್ ಹಾಕಿ ವಿಡಿಯೋ ಕಾಲ್ ಮಾಡುತ್ತಿದ್ದ ವೇಳೆ ಮೊಬೈಲ್​ ದೀಢೀರನೆ ಸ್ಫೋಟಗೊಂಡು ಯುವಕಕೋರ್ವ ಗಂಭೀರವಾಗಿ ಅನಾಹುತಕ್ಕೆ ತುತ್ತಾಗಿರುವ ಘಟನೆ ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದಿದೆ. ಮೊಬೈಲ್ ಸ್ಫೋಟದ ತೀರ್ವತೆಗೆ ಯುವಕನ ಕೈಗೆ ಗಂಭೀರ ಸ್ವರೂಪದ ಹಾನಿಯಾಗಿದ್ದು, ಈ ಘಟನೆಯಲ್ಲಿ ಆತನ ಮೂರು ಎಡಗೈ ಬೆರಳುಗಳು ಛಿದ್ರವಾಗಿವೆ. ಹೌದು, ಇತ್ತೀಚಿಗೆ ಮೊಬೈಲ್ ಬಳಕೆಯು ಅಪಾಯವನ್ನು ಮೈಮೇಲೆ ಎಳೆದುಕೊಂಡತಾಗಿದ್ದು, ಮೊಬೈಲ್ ಚಾರ್ಜ್ ಹಾಕಿ ತನ್ನ ಸಹೋದ್ಯೋಗಿ ಜೊತೆಗೆ ವಿಡಿಯೋ ಕರೆ ಮಾಡಿದ್ದ ಬಿಹಾರ ಮೂಲದ ಕೂಲಿಕಾರ್ಮಿಕ ತನ್ನ ಮೂರು ಬೆರಳುಗಳನ್ನೂ ಶಾಶ್ವತವಾಗಿ ಕಳೆದುಕೊಂಡಿದ್ದಾನೆ. ಈ ಆಘಾತಕಾರಿ ಘಟನೆ ಏಪ್ರಿಲ್ 11 ರಂದೇ ನಡೆದಿದ್ದು, ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಮೊಬೈಲ್ ಬ್ಲಾಸ್ಟ್ ಆಗಿ ಯುವಕ ಗಾಯಗೊಳ್ಳುತ್ತಿದ್ದಂತೆಯೇ ಆ ಯುವಕನ ಸ್ನೇಹಿತರು ಶಾಕ್ ಆಗಿದ್ದು, ತಕ್ಷಣವೇ ಆತನನ್ನು ವೈದೇಹಿ ಆಸ್ಪತ್ರಗೆ ದಾಖಲು‌ ಮಾಡಿದ್ದಾರೆ. ಈ ವೇಳೆ ಶಸ್ತ್ರಚಿಕಿತ್ಸೆ ಮಾಡಲಾಯಿತಾದರೂ ಯುವಕ ಮೂರು ಬೆರಳು ಕಳೆದುಕೊಂಡಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಮೊಬೈಲ್ ಸ್ಪೋಟದ ತೀರ್ವತೆಯನ್ನು ನೋಡಿ ವೈದ್ಯರು ಗಾಬರಿಯಾಗಿದ್ದಾರೆ.

ಸ್ಪೋಟಗೊಂಡಿರುವುದು ಜಿಯೋ ಪೋನ್ ಎಂದು ಹೇಳಲಾಗಿದ್ದು, ಈ ಬಗ್ಗೆ ಮತ್ತಷ್ಟು ತನಿಖೆ ನಡೆದ ನಂತರ ಸತ್ಯಾಸತ್ಯತೆ ಹೊರಬೀಳಿಲಿದೆ. ಮೊಬೈಲ್‌ಗಳ ಸ್ಪೋಟದಿಂದ ಇತ್ತೀಚಿಗೆ ಅನಾಹುತಗಳು ಹೆಚ್ಚುತ್ತಿವೆ. ಬೆಂಕಿಯ ಉಂಡೆಯಂತಿರುವ ಸ್ಮಾರ್ಟ್‌ಫೋನ್‌ಗಳ ಬಳಕೆಯಲ್ಲಿ ಸ್ವಲ್ಪ ಯಾಮಾರಿದರೂ ಕೂಡ ಕಷ್ಟವೇ. ಹಾಗಾಗಿ, ನೀವು ಈ ತಪ್ಪುಗಳನ್ನು ಮಾಡಲೇಬೇಡಿ. ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ ಬ್ಯಾಕ್ ಪೌಚ್‌ನಿಂದ ಮೊಬೈಲ್ ಸ್ಪೋಟ! ಮೊಬೈಲ್ ಸುರಕ್ಷಿತವಾಗಿರಲಿ ಎಂದು ಬಳಸುವ ಬ್ಯಾಕ್ ಪೌಚ್ ನಿಮ್ಮ ಮೊಬೈಲ್ ಸಿಡಿಯಲು ಮುಖ್ಯ ಕಾರಣಗಳಲ್ಲಿ ಒಂದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಮೊಬೈಲ್ ಅನ್ನು ಹೆಚ್ಚು ಬಳಸಿದಾಗ ಆ ಮೊಬೈಲ್ ಹೆಚ್ಚು ಬಿಸಿಯಾಗುತ್ತದೆ. ಮೊಬೈಲ್ ಬಿಸಿಯಾದಾಗ ಬ್ಯಾಕ್ ಪೌಚ್‌ಗಳು ಉಷ್ಣತೆಯನ್ನು ಹೊರಹಾಕಲು ಬಿಡುವುದಿಲ್ಲ. ಇದರ ಒತ್ತಡ ತಡೆಯಲಾರದೆ ಮೊಬೈಲ್ ಬ್ಯಾಟರಿಗಳು ಸಿಡಿಯುತ್ತವೆ ಎಂದು ತಿಳಿಸಿದೆ. ಚಾರ್ಜಿಂಗ್ ವೇಳೆ ಮೊಬೈಲ್ ಬಳಕೆ ಚಾರ್ಜಿಂಗ್ ವೇಳೆ ಸ್ಮಾರ್ಟ್‌ಫೋನ್ ಬಳಕೆ ಕೂಡ ಮೊಬೈಲ್ ಫೋನ್‌ನ ಸ್ಫೋಟಕ್ಕೆ ಮತ್ತೊಂದು ಕಾರಣ ಎಂದು ಸಂಶೋಧಕರು ತಿಳಿಸಿದ್ದಾರೆ. ಸ್ಮಾರ್ಟ್‌ಫೋನಿನ ಮದರ್ ಬೋರ್ಡ್‌ಗೆ ಚಾರ್ಜಿಂಗ್ ಒತ್ತಡ ಹೆಚ್ಚು ಬೀಳುವುದು ಕೂಡ ಮೊಬೈಲ್ ಸ್ಪೋಟಕ್ಕೆ ಕಾರಣ ಎಂದು ಹೇಳಿದ್ದಾರೆ. ಮೊಬೈಲ್ ಬ್ಯಾಟರಿ ಬಾಳಿಕೆಯನ್ನು ಅದರ ಸಾಫ್ಟ್‌ವೇರ್ ತಂತ್ರಜ್ಞಾನ ನಿಯಂತ್ರಿಸಿದರೂ ಸಹ ಅದರ ಒತ್ತಡವನ್ನು ತಡೆಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. ಕಳಪೆ ಪವರ್ ಬ್ಯಾಂಕ್ ಕಳಪೆ ಗುಣಮಟ್ಟದ ಪವರ್‌ಬ್ಯಾಂಕ್ ಕೂಡ ಮೊಬೈಲ್ ಸ್ಪೋಟಕ್ಕೆ ಕಾರಣ ಎಂದು ಸಂಶೋಧಕರು ತಿಳಿಸಿದ್ದಾರೆ. ಹಾಗಾಗಿ, ಪವರ್ ಬ್ಯಾಂಕ್ ಪವರ್ ಬ್ಯಾಂಕ್ ಬಳಸುವಾಗ ಎಚ್ಚರವಿರಲಿ. ನೀವು ಬಳಸುವ ಪವರ್ ಬ್ಯಾಂಕ್ ವಿದ್ಯುತ್ ಪ್ರವಾಹದ ಏರಿಳಿತ, ಶಾರ್ಟ್ ಸರ್ಕ್ಯೂಟ್, ದೀರ್ಘ ಚಾರ್ಜಿಂಗಳಿಂದಾಗುವ ಹಾಗೂ ಅತೀ ಬಿಸಿಯಾಗುವಿಕೆ ಸಮಸ್ಯೆಗಳಿಂದ ನಿಮ್ಮ ಸ್ಮಾರ್ಟ್‌ಫೋನಿನ ಸುರಕ್ಷತೆಯನ್ನೊದಗಿಸುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ. ಮತ್ತು ಯುಎಸ್‌ಬಿ ಕೇಬಲ್ ಬಗ್ಗೆ ಜಾಗೃತವಾಗಿರಿ. ಪದೇ ಪದೇ ಮೊಬೈಲ್ ಚಾರ್ಜ್ ಪದೇ ಪದೇ ಮೊಬೈಲ್ ಚಾರ್ಜ್ ಮಾಡುವ ಅಭ್ಯಾಸ ಬಿಟ್ಟುಬಿಡಿ ಇದರಿಂದ ಕೂಡ ಮೊಬೈಲ್ ಸ್ಪೋಟಗೊಳ್ಳುವ ಸಾಧ್ಯತೆ ಹೆಚ್ಚು ಎಂದು ಸಂಶೋಧಕರು ತಿಳಿಸಿದ್ದಾರೆ. ಮೊಬೈಲ್ ಬ್ಯಾಟರಿಯನ್ನು ಒಮ್ಮೆ (80%)ಪೂರ್ತಿಯಾಗುವವರೆಗೂ ಚಾರ್ಜ್ ಮಾಡಿದ ನಂತರ ಬಳಕೆ ಮಾಡಿ. ಪದೇ ಪದೇ ಚಾರ್ಜ್ ಮಾಡುವುದರಿಂದ ಬ್ಯಾಟರಿ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಸ್ಮಾರ್ಟ್‌ಫೋನಿನ ಬ್ಯಾಟರಿ ಸ್ಪೋಟವಾಗಬಹುದು ಎಂದಿದ್ದಾರೆ. ಕಳಪೆ ಚಾರ್ಜರ್ ಬಗ್ಗೆ ಎಚ್ಚರ! ಮೊಬೈಲ್ ಜೊತೆಗೆ ಬಂದಿದ್ದ ಚಾರ್ಜರ್ ಅನ್ನೇ ಯಾವಾಗಲೂ ಬಳಸಿ. ಚಾರ್ಜರ್ ಹಾಳಾದರೆ ಹಣ ಉಳಿಸುವ ಸಲುವಾಗಿ ಕಳಪೆ ಚಾರ್ಜರ್‌ಗಳನ್ನು ಖರೀದಿಸಿ ಬಳಸಬೇಡಿ. ಅವುಗಳು ವಿದ್ಯುತ್ ಪ್ರವಾಹದ ಏರಿಳಿತಗಳಿಂದ ಅಥವಾ ಚಾರ್ಜ್ ಸಂಪೂರ್ಣವಾದ ಬಳಿಕ ಆಗುವ ಹಾನಿಯಿಂದ ರಕ್ಷಿಸುವ ಸುರಕ್ಷತಾ ತಂತ್ರಜ್ಞಾನವನ್ನು ಹೊಂದಿರುವುದಿಲ್ಲ. ಅಂತಹ ಚಾರ್ಜರ್’ಗಳಿಂದ ನಿಮ್ಮ ಫೋನ್ ಸ್ಪೋಟಗೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos