ಬಿಜೆಪಿ ನಾಯಕರಿಗೆ ಮಾನ ಮರ್ಯಾದೆ ಇಲ್ಲಾ: ಡಿಸಿಎಂ

ಬಿಜೆಪಿ ನಾಯಕರಿಗೆ ಮಾನ ಮರ್ಯಾದೆ ಇಲ್ಲಾ: ಡಿಸಿಎಂ

ದೆಹಲಿ: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನದ ಬಿಡುಗಡೆಯಲ್ಲಿ ಅನ್ಯಾಯವಾಗಿದೆ, ನಮ್ಮ ತೆರಿಗೆ ನಮ್ಮ ಹಕ್ಕು  ಈ ಹಿನ್ನೆಲೆಯಲ್ಲಿ ಇಂದು ದೆಹಲಿಯ ಜಂತರ್ ಮಂತರ್ ನಲ್ಲಿ ಕಾಂಗ್ರೆಸ್ ಸರ್ಕಾರ ಪ್ರತಿಭಟನೆಗೆ ಮುಂದಾಗಿದೆ.

ನಮ್ಮ ಹೋರಾಟ ನಮ್ಮ ತೆರಿಗೆ ನಮ್ಮ ಹಕ್ಕು. ನಮ್ಮ ಪಾಲು, ನಿರ್ಮಲ ಸೀತಾರಾಮನ್ ರವರು ಹಿಂದಿನ ವರ್ಷ ಬಜೆಟ್ ಮಂಡನೆ ಮಾಡಿದರು, ಅವರು ಏನು ಹೇಳಿದರು ಅವರು ಏನು ಮಾತು ಕೊಟ್ಟಿದ್ದರು ಆ ಮಾತಿನ ಪ್ರಕಾರ ಕರ್ನಾಟಕಕ್ಕೆ ಅಷ್ಟು ಅನುದಾನ ಬಂದಿಯ್ಯ.

26 ಜನ ಎಂ ಪಿ ಗಳು  ಈ ವಿಷಯದ ಬಗ್ಗೆ ಒಂದು ದಿನ ಬಾಯಿ ಬಿಡಲಲಿಲ್ಲ, ಒಂದು ದಿನ ಕ್ವೆಶ್ಚನ್ ಮಾಡಿಲಿಲ್ಲ, ಒಂದು ದಿನ ರಾಜ್ಯಕ್ಕೆ ನ್ಯಾಯ ಕೊಡಿಸಿಲ್ವಲ್ಲಾ, ರಾಜಕ್ಕೆ ಡಬಲ್ ಇಂಜಿನ್ ಸರ್ಕಾರ ಬಂದ್ರೆ ನಾವೇನು ಮಾಡ್ತೀವಿ ಅಂತ ಹೇಳಿದ್ರಲ್ವಾ ಅವರು ಏನ್ ಮಾಡಿದರು ಇವತ್ತು ಅವರು ಮಾತನಾಡುತ್ತಿದ್ದಾರೆ.

ಮಾನ ಮರ್ಯಾದೆ ಏನೂ ಇಲ್ಲ, ನಾಚಿಕೆ ಇಲ್ಲ, ಈಗ ಹೋಗಿ ನಾವಿಲ್ಲಿ ಪ್ರತಿಭಟನೆ ಮಾಡ್ತಾ ಇದ್ದೀವಿ ಅಂತ ಗಾಂಧಿ ಸ್ಟ್ಯಾಚು ಹತ್ತಿರ ಬಿಜೆಪಿ ಸರ್ಕಾರ ಪ್ರತಿಭಟನೆ ಮಾಡುತ್ತಿದೆ, ನಾವು ಏನು ಮಾಡಿದ್ದೀರಿ ಅಂತ ನೀವು ಪ್ರತಿಭಟನೆ ಮಾಡುತ್ತಿದ್ದೀರಾ, ಏನು ಕರ್ನಾಟಕಕ್ಕೆ ನೀವು ತಂದಿದ್ದೀರಾ ಎಂದು ಡಿಕೆಶಿ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.

ಇವತ್ತು ನಾವು ಇಲ್ಲಿ ಬಂದಿರುವರು 136 ಜನ ಜನ ಎಂಎಲ್‌ಸಿ ಗಳಲ್ಲ ಕರ್ನಾಟಕ ರಾಜ್ಯನೇ ಇಲ್ಲಿ ಬಂದಿದೆ. ನಮಗೆ ಇಷ್ಟು ಮೋಸ ಆಗುತ್ತಿದೆ ಅಂತ ನಾವು ಅಂದುಕೊಂಡಿರಲಿಲ್ಲ ನಾವು ಹೋರಾಟ ಮಾಡ್ತೀರಿ ನಮ್ಮ ಹೋರಾಟ ಪ್ರಾರಂಭವಾಗಿದೆ, ನಮಗೆ ಗೆಲುವು ಸಿಕ್ಕೆ ಸಿಕ್ಕುತ್ತದೆ ಎಂದು ಡಿಕೆಶಿ ಹೇಳಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos