ಹಳ್ಳಿಹಕ್ಕಿಗೆ ಕೈಕೊಟ್ಟ ಬಿಜೆಪಿ

ಹಳ್ಳಿಹಕ್ಕಿಗೆ ಕೈಕೊಟ್ಟ ಬಿಜೆಪಿ

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಳಿಸಿ ಹಲವು ಟ್ವಿಸ್ಟ್ ಮತ್ತು ಟರ್ನ್ ಗಳಿಗೆ ಕಾರಣವಾಗಿದ್ದ ಮಾಜಿ ಸಚಿವ ಅಡಗೂರು ವಿಶ್ವನಾಥ್ ಥ್ರಿಲ್ಲರ್ ಹೀರೋ ಆಗುವ ಬದಲು ದುರಂತ ನಾಯಕನಾಗಿ ನಿಂತಿದ್ದಾರೆ.

ಸಮ್ಮಿಶ್ರ ಸರ್ಕಾರದ ಹಣೆ ಬರಹ ಬದಲಿಸಿದ್ದ ವಿಶ್ವನಾಥ್, ಯಡಿಯೂರಪ್ಪ ಅವರನ್ನು ಸಿಎಂ ಆಗಿ ಅಧಿಕಾರಕ್ಕೆ ತರುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ವಿಶ್ವನಾಥ್ ಈಗ ಏಕಾಂಗಿಯಾಗಿ ನಿಂತಿದ್ದಾರೆ. ಎರಡನೇ ಬಾರಿಯೂ ಶಕ್ತಿ ಸೌಧ ಪ್ರವೇಶಿಸುವ ಅವಕಾಶ ಕೈತಪ್ಪಿದೆ. ಅವರ ನಾಲ್ಕು ದಶಕಗಳ ರಾಜಕೀಯ ಜೀವನ ತುಂಬಾ ವರ್ಣಮಯವಾಗಿತ್ತು.

ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ಬಹುತೇಕ ಎಲ್ಲಾ ಪಕ್ಷಗಳ ಕದ ತಟ್ಟಿದ್ದಾರೆ. ದೇವರಾಜ್ ಅರಸ್ ಅವರ ಚಿಂತನೆಯ ಶಾಲೆಯಿಂದ ಬಂದ ವಿಶ್ವನಾಥ್, ಸಿದ್ದರಾಮಯ್ಯ, ಎಸ್ ಎಂ ಕೃಷ್ಣ ಮತ್ತು ಎಚ್ ಡಿ ದೇವೇಗೌಡ ಅವರ ಜೊತೆ ಸಂಘರ್ಷ ಮಾಡಿಕೊಂಡು ಬಂದ ವಿಶ್ವನಾಥ್ ಹಳ್ಳಿ ಹಕ್ಕಿ ಮೂಲಕ ತಮ್ಮದೇ ಆದ ಛಾಪು ಮೂಡಿಸಿಕೊಂಡವರು.

ಕವಿ-ರಾಜಕಾರಣಿ ತನ್ನದೇ ಆದ ರಾಜಕೀಯ ಕಥೆಯು ಇಂತಹ ತಿರುವು ಪಡೆಯಬಹುದು ಎಂದು ಯಾವತ್ತೂ ಎಣಿಸಿರಲಿಲ್ಲ, 2019ರ ರಾಜಕೀಯ ದಂಗೆಯಲ್ಲಿ ಭಾಗವಹಿಸಿದ್ದ ಅವರ ಸ್ನೇಹಿತರಿಗೆಲ್ಲಾ ತಲುಪಬಹುದೆಂಬ ತಕ್ಕ ಬಹುಮಾನ ಸಿಕ್ಕಿದೆ, ಆದರೆ ವಿಶ್ವನಾಥ್ ಗೆ ಅವಕಾಶ ಸಿಕ್ಕಿಲ್ಲ. 67 ವರ್ಷದ ವಿಶ್ವನಾಥ್ ಅವರನ್ನು ತಮ್ಮ ಉಪಯೋಗಕ್ಕೆ ತಕ್ಕಂತೆ ಬಳಸಿಕೊಂಡು ಕೈ ಬಿಡಲಾಗಿದೆ.

ಯಡಿಯೂರಪ್ಪ ಮತ್ತೊಮ್ಮೆ ಹಳ್ಳಿ ಹಕ್ಕಿ ಭವಿಷ್ಯವನ್ನು ಬದಲಿಸುವಂತಹ ಮಾಸ್ಟರ್ ಸ್ಟ್ರೋಕ್ ಕೊಡದಿದ್ದರೆ ವಿಶ್ವನಾಥ್ ಅವರ ರಾಜಕೀಯ ಜೀವನ ಅಂತ್ಯಗೊಳ್ಳುವ ಸಾಧ್ಯತೆಯಿದೆ.

ಫ್ರೆಶ್ ನ್ಯೂಸ್

Latest Posts

Featured Videos