28 ವಿದ್ಯಾರ್ಥಿಗಳನ್ನು ದತ್ತು ಪಡೆದ ಬಿಗ್ ಬಾಸ್-6 ವಿನ್ನರ್ ಶಶಿ!

28 ವಿದ್ಯಾರ್ಥಿಗಳನ್ನು ದತ್ತು ಪಡೆದ ಬಿಗ್ ಬಾಸ್-6 ವಿನ್ನರ್ ಶಶಿ!

ಬೆಂಗಳೂರು, ಮಾ, 26, ನ್ಯೂಸ್ ಎಕ್ಸ್ ಪ್ರೆಸ್: ಆಧುನಿಕ ರೈತ ಅಂತಾನೆ ಖ್ಯಾತಿಗಳಿಸಿರುವ ಶಶಿ ಕೆಲವು ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದಾರೆ. ಜೊತೆಗೆ ಶಶಿ ಅಭಿನಯದ ‘ಕೌಸಲ್ಯಾ ಕಲ್ಯಾಣ’ ಸಿನಿಮಾ ಕೂಡ ರಿಲೀಸ್ ಗೆ ರೆಡಿಯಾಗಿದೆ. ಇದರ ಜೊತೆಗೀಗ ಶಶಿ ಮತ್ತೊಂದು ಹೊಸ ಕೆಲಸಕ್ಕೆ ಕೈ ಹಾಕಿದ್ದಾರೆ. ಹೌದು, ಶಶಿ ಒಂದು ಶಾಲೆಯ ಮಕ್ಕಳನ್ನು ದತ್ತು ಪಡೆದಿದ್ದಾರೆ. ಈ ಮೂಲಕ ಆ ಶಾಲೆಯ ಮಕ್ಕಳ ವಿದ್ಯಾಭ್ಯಾಸವನ್ನು ನೋಡಿಕೊಳ್ಳುವ ಹೊಸ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಕೌಸಲ್ಯಾ ಜೊತೆ ‘ಬಿಗ್ ಬಾಸ್ ಸೀಸನ್ 6’ ವಿನ್ನರ್ ಶಶಿ ಕಲ್ಯಾಣ ಶಶಿ ಸ್ವಂತ ಊರಾದ ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಗ್ರಾಮದ ವಿವಿಎಸ್ ಶಾಲೆಯ 28 ಮಕ್ಕಳನ್ನು ಶಶಿ ದತ್ತು ಪಡೆದಿದ್ದಾರೆ. ವಿಶೇಷ ಅಂದ್ರೆ, ಶಶಿ ಓದಿ ಆಡಿ ಬೆಳೆದಿರುವ ಶಾಲೆಯಾಗಿದೆ. ಹಾಗಾಗಿ ಮತ್ತಷ್ಟು ಕಾಳಜಿಯಿಂದ ಈ ಶಾಲೆ ಮಕ್ಕಳನ್ನು ದತ್ತು ಪಡೆಯುವ ಮೂಲಕ ಶಾಲೆಯ ಋಣ ತೀರಿಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos