ಭದ್ರಾವತಿಯ ಸುಂದರಿ ಯಶ್ ಜೊತೆ ಪೋಸ್

ಭದ್ರಾವತಿಯ ಸುಂದರಿ ಯಶ್ ಜೊತೆ ಪೋಸ್

ಬೆಂಗಳೂರು, ನ. 12: ಶಿವಮೊಗ್ಗದ ಭದ್ರಾವತಿಯ ಸುಂದರಿ ಆಶಾ ಭಟ್ ಅವರು ಬಾಲಿವುಡ್ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದಿದ್ದರು. ಇದೀಗ ಕನ್ನಟದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದಲ್ಲಿ ಆಶಾ ಭಟ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಹೌದು, ರಾಬರ್ಟ್ ಸಿನಿಮಾ ಶೂಟಿಂಗ್ ಬಹುತೇಕ ಮುಗಿದಿದೆ. ಈ ಸಿನಿಮಾದ ಪೋಸ್ಟರ್ನಲ್ಲಿ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದ ಆಶಾ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರನ್ನು ಭೇಟಿಯಾಗಿದ್ದಾರೆ. ಯಶ್ ಸರಳತೆಗೆ ಮನಸೋತಿರುವ ಆಶಾ ಭಟ್ ತಾವು ಕೂಡ ರಾಕಿ ಭಾಯ್ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. ಶಿವಮೊಗ್ಗದ ಭದ್ರಾವತಿಯ ಸುಂದರಿ 2014ರಲ್ಲಿ ಮಿಸ್ ಸುಪ್ರಾ ನ್ಯಾಷನಲ್ ಕಿರೀಟವನ್ನು ಪಡೆದಿದ್ದರು. ಬಳಿಕ, ಹಿಂದಿಯ ಜಂಗಲ್ ಚಿತ್ರದಲಗಲಿ ನಾಯಕಿಯರಲ್ಲಿ ಒಬ್ಬರಾಗಿ ನಟಿಸಿದ್ದರು. ರಾಬರ್ಟ್ ಸಿನಿಮಾದಲ್ಲಿ ದರ್ಶನ್ ಜೊತೆ ನಟಿಸಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ಆಶಾ ಭಟ್ ಹೇಳಿದ್ದರು.

ರಾಕಿಂಗ್ ಸ್ಟಾರ್ ಯಶ್ ಅವರನ್ನು ಭೇಟಿಯಾಗಿದ್ದು ನನ್ನ ಪಾಲಿನ ಗೌರವ ಮತ್ತು ಹೆಮ್ಮೆಯ ಸಂಗತಿ ಎಂದು ಆಶಾ ಭಟ್ ಟ್ವಿಟ್ಟರ್ನಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ ಆ ಫೋಟೋಗಳಿಗೆ ಯಶ್ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos