ಕಿವಿ ಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳು

ಕಿವಿ ಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳು

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಕಷ್ಟಕರವಾಗಿದೆ. ನಮ್ಮ ಸುತ್ತ ಮುತ್ತ ಸಿಗುವಂತಹ ಪದಾರ್ಥಗಳಲ್ಲಿ ನಮ್ಮ ಆರೋಗ್ಯ ಅಡಗಿದೆ.

ಹಣ್ಣುಗಳನ್ನು ಸೇವಿಸುವುದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಪೌಷ್ಟಿಕಾಂಶವುಳ್ಳ ಹಣ್ಣುಗಳು ನಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ಅದರಲ್ಲಿಯೂ ಕೆಲವು ವಿಶೇಷ ಗುಣಗಳನ್ನು ಹೊಂದಿರುವ ಹಣ್ಣುಗಳಿವೆ. ಈ ಹಣ್ಣುಗಳಲ್ಲಿ ಕಿವಿ ಕೂಡಾ ಒಂದು. ಸಿಹಿ ಮತ್ತು ಹುಳಿ ಮಿಶ್ರಿತವಾಗಿರುವ ಈ ಹಣ್ಣಿಗೆ ಬೇಡಿಕೆ ಕೂಡಾ ಹೆಚ್ಚುತ್ತಿದೆ. ಇದನ್ನು ಸಿಪ್ಪೆ ಸಮೇತವಾದರೂ ತಿನ್ನಬಹುದು ಇಲ್ಲಾ ಸಿಪ್ಪೆ ತೆಗೆದು ಬೇಕಾದರೂ ಸೇವಿಸಬಹುದು. ಇದನ್ನು ಸೇವಿಸುವುದರಿಂದ ಅನೇಕ ರೋಗಗಳಿಂದ ನಮ್ಮನ್ನು ಕಾಪಾಡಿಕೊಳ್ಳಬಹುದು.

ಕಿವಿ ಹಣ್ಣು ಪೊಟ್ಯಾಸಿಯಮ್, ಫೈಬರ್, ವಿಟಮಿನ್ ಸಿ, ಫೋಲಿಕ್ ಆಮ್ಲ, ವಿಟಮಿನ್ ಇ ಮತ್ತು ಪಾಲಿಫಿನಾಲ್‌ಗಳ ಆಗರವಾಗಿದೆ. ಕಿವಿಯಲ್ಲಿ ಕಡಿಮೆ ಕ್ಯಾಲೋರಿಯೂ ಇರುವುದರಿಂದ ತೂಕ ಇಳಿಸಲು ಈ ಹಣ್ಣು ಬೆಸ್ಟ್ ಆಗಿರುತ್ತದೆ.

ದೃಷ್ಟಿಯನ್ನು ಹೆಚ್ಚಿಸುತ್ತದೆ: ದೃಷ್ಟಿ ದೋಷವನ್ನು ಸುಧಾರಿಸಲು ಕಿವಿ ಪ್ರಯೋಜನಕಾರಿಯಾಗಿದೆ. ಇದನ್ನು ಸೇವಿಸುವುದರಿಂದ ದೃಷ್ಟಿಯನ್ನು  ಹೆಚ್ಚಿಸಬಹುದು.

ರೋಗನಿರೋಧಕ ಶಕ್ತಿ ಹೆಚ್ಚುತ್ತದೆ : ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರು ಋತುಮಾನದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಹಾಗಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕಿವಿ ಹಣ್ಣನ್ನು ಸೇವಿಸಬಹುದು. ಇದರಲ್ಲಿರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ.

ಜ್ವರದ ಸಮಯದಲ್ಲಿ ಪ್ರಯೋಜನಕಾರಿ: ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಫೈಬರ್‌ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಕಿವಿಯನ್ನು ಜ್ವರದ ಸಮಯದಲ್ಲಿ ಸೇವಿಸಬಹುದು. ಡೆಂಗ್ಯೂನಿಂದ ಬಳಲುತ್ತಿದ್ದವರು ಕಿವಿ ಹಣ್ಣನ್ನು ಸೇವಿಸಬಹುದು. ವಾಸ್ತವವಾಗಿ, ಡೆಂಗ್ಯೂನಲ್ಲಿ ಪ್ಲೇಟ್ಲೆಟ್  ಗಳು  ಬೇಗನೆ ಕಡಿಮೆಯಾಗಲು ಪ್ರಾರಂಭಿಸುತ್ತವೆ. ಹಾಗಾಗಿ ಕಿವಿ ಹಣ್ಣು  ಪ್ಲೇಟ್ಲೆಟ್ ಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯಕ್ಕೆ : ಕಿವಿ ಹಣ್ಣಿನ ಸೇವನೆಯು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.ಇದರಲ್ಲಿರುವ ಫೈಬರ್ ಮತ್ತು ಪೊಟ್ಯಾಸಿಯಮ್ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ.

ಮಲಬದ್ಧತೆಯನ್ನು ನಿವಾರಿಸುತ್ತದೆ: ಮಲಬದ್ಧತೆಯಿಂದ ಬಳಲುತ್ತಿದ್ದರೆ, ಪ್ರತಿದಿನ 2-3 ಕಿವು ಹಣ್ಣು ಸೇವಿಸಬಹುದು. ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುವಲ್ಲಿ ಕಿವಿ ತುಂಬಾ ಪ್ರಯೋಜನಕಾರಿಯಾಗಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos