ಭಜರಂಗಿ 2 ಸಿನಿಮಾ ಸೆಟ್ ಬೆಂಕಿ

ಭಜರಂಗಿ 2 ಸಿನಿಮಾ ಸೆಟ್ ಬೆಂಕಿ

ಬೆಂಗಳೂರು, ಜ. 16: ಸೆಂಚುರಿ ಸ್ಟಾರ್ ಡಾ.ಶಿವರಾಜ್‌ಕುಮಾರ್ ಅಭಿನಯದ ‘ಭಜರಂಗಿ 2’ ಸಿನಿಮಾ ಸೆಟ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ದುಬಾರಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸೆಟ್ನ ಅರ್ಧ ಭಾಗ ಸುಟ್ಟುಹೋಗಿದೆ.

ಎ. ಹರ್ಷ ನಿರ್ದೇಶಿಸುತ್ತಿರುವ ಈ ಸಿನಿಮಾದ 2ನೇ ಲುಕ್ ಅನ್ನು 2 ದಿನಗಳ ಹಿಂದೆ ಬಿಡುಗಡೆ ಮಾಡಲಾಗಿತ್ತು. ಶಿವಣ್ಣನ ಹೊಸ ಲುಕ್ಗೆ ಭಾರೀ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಬೆಂಕಿಯುಗುವ ಕಂಗಳ ಶಿವಣ್ಣನ ‘ಭಜರಂಗಿ’ ಅವತಾರ ಸಿನಿಮಾ ಬಗೆಗಿನ ಕುತೂಹಲವನ್ನು ಹೆಚ್ಚಿಸಿತ್ತು.

ಭಜರಂಗಿ 2 ಸಿನಿಮಾಗಾಗಿ ದಾವಣಗೆರೆಯಲ್ಲಿ ಬೃಹತ್ ಸೆಟ್ ಹಾಕಲಾಗಿತ್ತು. ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯಕ್ಕಾಗಿ ಹಾಕಿದ್ದ ಸೆಟ್ನಲ್ಲಿ ನಡೆಯುತ್ತಿದ್ದ ಶೂಟಿಂಗ್ನಲ್ಲಿ ಶಿವರಾಜ್ಕುಮಾರ್ ಕೂಡ ಭಾಗಿಯಾಗಿದ್ದರು. ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸೆಟ್ ಬೆಂಕಿಗೆ ಆಹುತಿಯಾಗಿದೆ. ಈ ಸೆಟ್ನಲ್ಲಿ ಕಲಾವಿದರು, ತಂತ್ರಜ್ಞರು, ಸಹಾಯಕರು ಸೇರಿ 100 ಮಂದಿ ಇದ್ದರು ಎಂದು ತಿಳಿದುಬಂದಿದೆ.

ಶೂಟಿಂಗ್ ನಡೆಯುತ್ತಿರುವಾಗ ಸೆಟ್ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಸೆಟ್ನ ಒಂದು ಭಾಗ ಅಗ್ನಿಗೆ ಆಹುತಿಯಾಗಿದೆ. ಸುಮಾರು ಒಂದು ಗಂಟೆ ಹೊತ್ತಿ ಉರಿದ ಸೆಟ್ನಲ್ಲಿನ ಬೆಂಕಿ ಆರಿಸಲು ಚಿತ್ರತಂಡ ಸಾಕಷ್ಟು ಪ್ರಯತ್ನಿಸಿತ್ತು. ಅದೃಷ್ಟವಶಾತ್ ಈ ಬೆಂಕಿ ದುರಂತದಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos