ಆಟೋ ಚಾಲಕನ ಮನೆ ಮೇಲಿನ ಐಟಿ ದಾಳಿಗೆ ಟ್ವಿಸ್ಟ್!

ಆಟೋ ಚಾಲಕನ ಮನೆ ಮೇಲಿನ ಐಟಿ ದಾಳಿಗೆ ಟ್ವಿಸ್ಟ್!

ಬೆಂಗಳೂರು, ಮೇ.2, ನ್ಯೂಸ್ ಎಕ್ಸ್ ಪ್ರೆಸ್: ಬೆಂಗಳೂರಿನಲ್ಲಿ ಆಟೋ ಚಾಲಕನ ಮನೆ ಮೇಲೆ ನಡೆದ ಐಟಿ ದಾಳಿ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಆಟೋ ಚಾಲಕನ ಹೆಸರಿನಲ್ಲಿ ವಿದೇಶಿ ಮಹಿಳೆಯೊಬ್ಬರು ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಏಪ್ರಿಲ್ 16ರಂದು ವೈಟ್‌ ಫೀಲ್ಡ್ ಪ್ರದೇಶದಲ್ಲಿರುವ ‘ದ್ವಾರಕಮಾಯಿ’ ಹೆಸರಿನ ವಿಲ್ಲಾ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ 7.9 ಕೋಟಿ ನಗದು ಹಣವನ್ನು ವಶಕ್ಕೆ ಪಡೆಯಲಾಗಿತ್ತು. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆಟೋ ಚಾಲಕ ಸುಬ್ರಮಣಿ ಅವರ ವಿಲ್ಲಾ ಮೇಲೆ ದಾಳಿ ಮಾಡಿದ್ದ ಅಧಿಕಾರಿಗಳು ಬೇನಾಮಿ ಆಸ್ತಿ ವರ್ಗಾವಣೆಗಳ ಕಾಯ್ದೆ 1988ರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಮನೆಯಲ್ಲಿ ಸಿಕ್ಕ ಹಣದ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ಬೆಂಗಳೂರಿನ ಆಟೋ ಡ್ರೈವರ್ ಮನೆ ಮೇಲೆ ಐಟಿ ದಾಳಿ ನಗರದ ಬಿಲ್ಡರ್‌ವೊಬ್ಬರಿಗೂ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ‘ದ್ವಾರಕಮಾಯಿ’ ಹೆಸರಿನ ವಿಲ್ಲಾದ ಅಂದಾಜು ಮೌಲ್ಯ ಸುಮಾರು 1.6 ಕೋಟಿ. ವಿಲ್ಲಾವನ್ನು ಸಂಪೂರ್ಣ ನಗದು ಹಣ ನೀಡಿ ಖರೀದಿ ಮಾಡಿದ್ದರು ಎಂಬುದು ಅಧಿಕಾರಿಗಳ ಕುತೂಹಲಕ್ಕೆ ಕಾರಣವಾಗಿದೆ. ‘ದ್ವಾರಕಮಾಯಿ’ ಹೆಸರಿನ ವಿಲ್ಲಾ ಸೇರಿದಂತೆ ಬೆಂಗಳೂರಿನ ಹಲವು ಕಡೆ ಆಟೋ ಚಾಲಕ ಸುಬ್ರಮಣಿ ಹೆಸರಿನಲ್ಲಿ ಆಸ್ತಿಗಳಿವೆ. ಒಬ್ಬ ವಿದೇಶಿ ಮಹಿಳೆ ಆಸ್ತಿಯನ್ನು ಆಟೋ ಚಾಲಕನ ಹೆಸರಿನಲ್ಲಿ ಖರೀದಿ ಮಾಡಿರುವುದು ಬೆಳಕಿಗೆ ಬಂದಿದೆ. ಆದರೆ, ವಿದೇಶಿ ಮಹಿಳೆ ಪರಿಚಯವಾಗಿದ್ದು ಹೇಗೆ? ಎಂದು ತನಿಖೆ ನಡೆಯುತ್ತಿದೆ. ‘ದ್ವಾರಕಮಾಯಿ’ ಹೆಸರಿನ ವಿಲ್ಲಾ ಖರೀದಿಗೆ ಮಹಿಳೆ ಜೊತೆ ಸುಬ್ರಮಣಿ ಬಂದಿದ್ದ ಎಂಬ ಮಾಹಿತಿ ಅಧಿಕಾರಿಗಳಿಗೆ ಸಿಕ್ಕಿದೆ. 2015ರಿಂದ ವಿಲ್ಲಾದ ಮೊದಲ ಮಹಡಿಯಲ್ಲಿ ವಿದೇಶಿ ಮಹಿಳೆ, ನೆಲ ಮಹಡಿಯಲ್ಲಿ ಸುಬ್ರಮಣಿ ಕುಟುಂಬ ಸಮೇತ ವಾಸವಾಗಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos