ಅತಿಥಿಗಳ ಖಾಸಗಿ ದೃಶ್ಯ ಸೆರೆಹಿಡಿದ ನಾಲ್ವರ ಬಂಧನ

ಅತಿಥಿಗಳ ಖಾಸಗಿ ದೃಶ್ಯ ಸೆರೆಹಿಡಿದ ನಾಲ್ವರ ಬಂಧನ

ಸಿಯೋಲ್, ಮಾ.21, ನ್ಯೂಸ್ ಎಕ್ಸ್ ಪ್ರೆಸ್: ದಕ್ಷಿಣ ಕೊರಿಯದ ವಿವಿಧ ನಗರಗಳ 30 ಹೋಟೆಲ್‌ಗಳ 42 ಕೊಠಡಿಗಳಲ್ಲಿ ರಹಸ್ಯ ಕ್ಯಾಮರ ಅಳವಡಿಸಿ 1600 ಅತಿಥಿಗಳ ಖಾಸಗಿ ದೃಶ್ಯಗಳನ್ನು ಸೆರೆಹಿಡಿದ ಘಟನೆಗೆ ಸಂಬಂಧಿಸಿ ನಾಲ್ವರು ಯುವಕರನ್ನು ಬಂಧಿಸಲಾಗಿದೆ.

ಆರೋಪಿಗಳು ಹೊಟೇಲ್ ಕೊಠಡಿಗಳ ಗೋಡೆಗಳಲ್ಲಿ, ದಿನ ಬಳಕೆಯ ವಸ್ತುಗಳಲ್ಲಿ ಅನೇಕ ಕ್ಯಾಮರಾಗಳನ್ನು ಅಳವಡಿಸಿ ಗ್ರಾಹಕರ ರಹಸ್ಯ ದೃಶ್ಯಗಳನ್ನು ಸೆರೆಹಿಡಿದು ಅವುಗಳನ್ನು ದುಡ್ಡಿಗಾಗಿ ನೇರ ಪ್ರಸಾರ ಮಾಡುತ್ತಿದ್ದರು.

ಡಿಜಿಟಲ್ ಟೆಲಿವಿಷನ್ ಬಾಕ್ಸ್‌ಗಳು, ಗೋಡೆಗಳ ಸಾಕೆಟ್‌ಗಳು, ಹೇರ್ ಡ್ರೈಯರ್‌ಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಅಡಗಿಸಡಲಾದ ಕ್ಯಾಮರಾಗಳಿಂದ ಖಾಸಗಿ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿತ್ತು. ಹೊಟೇಲ್ ಕೊಠಡಿಗಳಲ್ಲಿರುವ ಅತಿಥಿಗಳ ಖಾಸಗಿ ಸಂಭಾಷಣೆಗಳು, ಸ್ನಾನದಕೊಠಡಿಯ ದೃಶ್ಯಗಳು, ಲೈಂಗಿಕ ದೃಶ್ಯಗಳು, ಪ್ರಾಥಮಿಕ ಕ್ರಿಯೆಗಳ ದೃಶ್ಯಗಳನ್ನು ಕೂಡ ಆರೋಪಿಗಳು ಗ್ರಾಹಕರ ಕಂಪ್ಯೂಟರ್‌ಗಳಿಗೆ ನೇರ ಪ್ರಸಾರ ಮಾಡುತ್ತಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos