ಬಿಜೆಪಿ ಹಿರಿಯ ಮುಖಂಡನಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ!

ಬಿಜೆಪಿ ಹಿರಿಯ ಮುಖಂಡನಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ!

ಗುವಾಹಟಿ, ಮಾ.16, ನ್ಯೂಸ್ ಎಕ್ಸ್ ಪ್ರೆಸ್: 2019ರ ಲೋಕಸಭೆ ಚುನಾವಣೆಗೆ ಪಕ್ಷದ ಸ್ಪರ್ಧಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದ್ದಕ್ಕೆ ಅಸಮಾಧಾನಗೊಂಡ ಬಿಜೆಪಿಯ ಹಿರಿಯ ಮುಖಂಡ ಹಾಗೂ ಅಸ್ಸಾಂನ ತೇಜ್‌ಪುರ್‌ ಕ್ಷೇತ್ರದ ಸಂಸದರೂ ಆಗಿರುವ ಆರ್‌.ಪಿ.ಶರ್ಮಾ ಅವರು ಶನಿವಾರ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.

“ಆರೆಸ್ಸೆಸ್-ವಿಎಚ್‌ಪಿಯಲ್ಲಿ 15 ವರ್ಷ ಮತ್ತು ಬಿಜೆಪಿಯಲ್ಲಿ 29 ವರ್ಷ ಸೇವೆ ಸಲ್ಲಿಸಿದ ಬಳಿಕ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಹಾಲಿ ಸಂಸದನಾಗಿ ನನ್ನ ಹೆಸರನ್ನು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೇರಿಸದಿರುವುದರಿಂದ ಅವಮಾನವಾಗಿದೆ” ಎಂದು ಶರ್ಮಾ ಅವರು ತಮ್ಮ ಫೇಸ್‌ ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos