ಮೇಲುಸ್ತುವಾರಿಗೆ ತಜ್ಞರ ತಂಡ ನೇಮಕ

ಮೇಲುಸ್ತುವಾರಿಗೆ ತಜ್ಞರ ತಂಡ ನೇಮಕ

ಅಯೋಧ್ಯೆ: ರಾಮ ಮಂದಿರ ನಿರ್ಮಾಣ ಸಮಿತಿಯು ಮಂದಿರಕ್ಕೆ ತಳಪಾಯ ಹಾಕುವ ಕಾರ್ಯದ ಮೇಲುಸ್ತುವಾರಿಗಾಗಿ ಎಂಟು ಸದಸ್ಯರ ತಜ್ಞರ ಸಮಿತಿಯನ್ನು ನೇಮಿಸಿದೆ.
ಐಐಟಿ (ನವದೆಹಲಿ) ಮಾಜಿ ನಿರ್ದೇಶಕ ವಿ.ಎಸ್.ರಾಜು ಅವರ ನೇತೃತ್ವದ ಈ ಸಮಿತಿಯಲ್ಲಿ ಸಿಬಿಆರ್‌ಐ (ರೂರ್ಕಿ) ನಿರ್ದೇಶಕ ಎನ್.ಗೋಪಾಲ ಕೃಷ್ಣನ್, ಎನ್‌ಐಟಿ (ಸೂರತ್) ನಿರ್ದೇಶಕ ಎಸ್.ಆರ್.ಗಾಂಧಿ, ಐಐಟಿ (ಗುವಾಹಟಿ) ನಿರ್ದೇಶಕ ಟಿ.ಜಿ.ಸೀತಾರಾಮ್, ಐಐಟಿ (ನವದೆಹಲಿ) ಪ್ರಾಧ್ಯಾಪಕ ಬಿ.ಭಟ್ಟಾಚಾರ್ಯ, ಟಿಸಿಐ ಸಲಹೆಗಾರ ಎ.ಪಿ.ಮುಲ್ಲಾ, ಐಐಟಿಯ (ಮದ್ರಾಸ್) ಮನು ಸಂತಾನಂ ಹಾಗೂ ಐಐಟಿಯ (ಬಾಂಬೆ) ಪ್ರದೀಪ್ತ ಬ್ಯಾನರ್ಜಿ ಅವರು ಇದ್ದಾರೆ.
ವಿಶ್ವ ದರ್ಜೆಯ ಮಂದಿರ ಕಟ್ಟುವುದು ನಮ್ಮ ಗುರಿ. ಮಂದಿರದ ವಿನ್ಯಾಸ ಹಾಗೂ ಇತರ ಕಾರ್ಯಗಳನ್ನು ಪರಿಶೀಲಿಸಲು ತಜ್ಞರ ಸಮಿತಿ ರಚಿಸಬೇಕೆಂಬ ಬೇಡಿಕೆ ಕೇಳಿಬಂದಿತ್ತು. ಮಂದಿರ ನಿರ್ಮಾಣ ಸಮಿತಿಯ ಸಲಹೆಯಂತೆಯೇ ನುರಿತ ಎಂಜಿನಿಯರ್‌ಗಳು ಹಾಗೂ ವಿನ್ಯಾಸಕಾರರನ್ನೊಳಗೊಂಡ ಸಮಿತಿ ರಚಿಸಲಾಗಿದೆ’ ಎಂದು ಅಯೋಧ್ಯೆಯ ಬಿಜೆಪಿ ಶಾಸಕ ವೇದ್ ಗುಪ್ತಾ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos