ಅನುಪಮಾ ಗೌಡ ಹೊಸ ಲುಕ್‌ಗೆ ಅಭಿಮಾನಿಗಳು ಫಿದಾ!

ಅನುಪಮಾ ಗೌಡ ಹೊಸ ಲುಕ್‌ಗೆ ಅಭಿಮಾನಿಗಳು ಫಿದಾ!

ಬೆಂಗಳೂರು: ನಮ್ಮ ಸ್ಯಾಂಡಲ್ವುಡ್ ಚಿತ್ರರಂಗದಲ್ಲಿ ಹಲವಾರು ನಟಿಯರು ಅವರ ವೇಷಭೂಷಣದಲ್ಲಿಯೇ ಎಲ್ಲರ ಗಮನ ಸೆಳೆಯುತ್ತಾರೆ. ಅದೇ ತರಹ ಅನುಪಮಾ ಗೌಡ ಅವರ ಹೊಸ ಗೆಟಪ್ ಈಗ ಎಲ್ಲರ ಗಮನ ಸೆಳೆಯುತ್ತಾ ಇದೆ.
ಅಕ್ಕ ಧಾರಾವಾಹಿ ಮೂಲಕ ಎಲ್ಲರ ಮನೆ ಮಾತಾದ ನಟಿ ಅನುಪಮಾ ಗೌಡ. ಭೂಮಿಕಾ ಹಾಗೂ ದೇವಿಕಾ ಎಂಬ ಎರಡು ಬಗೆಯ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿ ಜನರ ಮನಗೆದ್ದ ನಟಿ ಎಂದರೆ ಅನುಪಮಾ ಗೌಡ.
ನಿರೂಪಕಿಯಾಗಿ ಎಲ್ಲರ ಗಮನ ಸೆಳೆದ ನಟಿ ಅನುಪಮಾ, ಬದುಕಿನಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ತಾನು ಮನಸ್ಸನ್ನು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬ ರೀತಿ ಸಾಧಿಸಿ ತೋರಿಸಿದ್ದಾರೆ.
ಇದೀಗ ಅನುಪಮಾ ಗೌಡ ಲಂಗ ದಾವಣಿ ತೊಟ್ಟು ಕ್ಯಾಮರಾಗೆ ಭರ್ಜರಿ ಪೋಸ್ ನೀಡಿದ್ದು, ದರ್ಶನ ಅಭಿನಯದ ಗಜ ಚಿತ್ರದ, ಏನು ಹೇಳಿ ಅಂದನಾ…. ಸಾಲುತಿಲ್ಲ ವ್ಯಾಕರಣ… ಕಣ್ಣಿನ ಬಾಣನಾ..ಬೀಸುತ್ತಾಳೆ ನೋಡಣ್ಣ ಎಂಬ ಹಾಡಿನ ಸಾಲುಗಳನ್ನು ಬರೆದುಕೊಂಡಿದ್ದಾರೆ.
ಅನುಪಮಾ ಹೊಸ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿರುವುದು ಖಚಿತ. ಇದೀಗ ಅಭಿಮಾನಿಗಳು ಅನುಪಮಾ ಅವರ ಫೋಟೋಗಳಿಗೆ ನಾನಾ ರೀತಿಯ ಕಾಮೆಂಟ್ ಮಾಡುತ್ತಾ ಇದ್ದು, ಗೂಳಿ ಕೆನ್ನೆಯ ಚೆಲುವೆ ಬಹಳ ಇಷ್ಟ ಪಟ್ಟಿದ್ದಾರೆ. ಹಲವಾರು ಅಭಿಮಾನಿಗಳು ಗುಳಿಕೆನ್ನೆಯ ಚೆಲುವೆ.. ಸುಂದರಿಯ ಹಾಗೆ ಕಾಣಿಸುತ್ತಾ ಇದ್ದಿರಿ ಎಂದೆಲ್ಲ ಕಾಮೆಂಟ್ ಮಾಡುತ್ತಾ ಇದ್ದಾರೆ.
ಅನುಪಮಾ ಗೌಡ ಈಗಾಗಲೇ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ. ಅಭಿಮಾನಿಗಳು ಮುದ್ದು ಮುದ್ದಾಗಿ ಕಾಣಿಸಿಕೊಂಡಿರುವ ಅನುಪಮಾ ಅವರ ಪೋಟೋಗಳನ್ನು ಇಷ್ಟಪಟ್ಟಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos