ಸಿನಿಮಾ ನೋಡಲು ಹೋದ ವ್ಯಕ್ತಿ ಸಾವು!

ಸಿನಿಮಾ ನೋಡಲು ಹೋದ ವ್ಯಕ್ತಿ ಸಾವು!

ಥೈಲ್ಯಾಂಡ್, ಜು.06:  ಹಾಲಿವುಡ್ ಸಿನಿಮಾ ‘ಅನ್ನಾಬೆಲ್ಲೆ ಕಮ್ಸ್ ಹೋಮ್ ’ ಸಿನಿಮಾ ಜೂನ್ 26 ರಂದು ತೆರೆ ಕಂಡಿತ್ತು, ಈ ಸಿನಿಮಾ ನೋಡಲೆಂದು ಸಿನಿಮಾ ಮಂದಿರಕ್ಕೆ ಹೋಗಿದ್ದ ವ್ಯಕ್ತಿ ಅಲ್ಲಿಯೇ ಮೃತಪಟ್ಟಿರುವ ಘಟನೆ ಥೈಲ್ಯಾಂಡ್ ನಲ್ಲಿ ನಡೆದಿದೆ. 77 ವರ್ಷದ ಬರ್ನಡ್ ಚನ್ನಿಂಗ್ ಎಂಬ ಹಿರಿಯ ವ್ಯಕ್ತಿ ಅನ್ನಾಬೆಲ್ಲೆ ಸಿನಿಮಾ ನೋಡಲು ಥೈಲ್ಯಾಂಡ್ ನ ಪಟ್ಟಯ್ಯ ಶಾಪಿಂಗ್ ಮಾಲ್ ಗೆ ತೆರಳಿದ್ದರು. ಸಿನಿಮಾ ಮುಗಿದ ನಂತರ ಪಕ್ಕದಲ್ಲಿ ಇದ್ದ ಮಹಿಳೆ ಆ ವ್ಯಕ್ತಿಯನ್ನು ಎಬ್ಬಿಸಲು ಹೋದಾಗ ಮೃತಪಟ್ಟಿದ್ದಾರೆ ಎಂದು ತಿಳಿದಿದೆ. ಸಾವಿಗೆ ಸೂಕ್ತ ಕಾರಣ ಇನ್ನು ತಿಳಿದು ಬಂದಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos