ಅಮೇರಿಕಾ ಅಧ್ಯಕ್ಷ ಟ್ರಂಪ್ ಮತ್ತೆ ಅಜ್ಜ

ಅಮೇರಿಕಾ ಅಧ್ಯಕ್ಷ ಟ್ರಂಪ್ ಮತ್ತೆ ಅಜ್ಜ

ವಾಷಿಂಗ್ಟನ್, ಆ.21 : ಅಮೇರಿಕಾ ಅಧ್ಯಕ್ಷ ಟ್ರಂಪ್ ಇದೀಗ ಖುಷಿಯ ವಿಚಾರವೊಂದಕ್ಕೆ ಮತ್ತೆ ಸುದ್ದಿಯಾಗಿದ್ದಾರೆ. ದೊಡ್ಡಣ್ಣ ಅಂತಲೇ ಕರೆಸಿಕೊಳ್ಳುವ ಅಮೆರಿಕಾದ ಚುಕ್ಕಾಣಿ ಹಿಡಿದಿರುವ ಟ್ರಂಪ್, ಈಗ ತಾತನಾಗಿದ್ದಾರೆ. ಆದ್ರೆ, ಅವರು ಬರೊಬ್ಬರಿ 10ನೇ ಬಾರಿಗೆ ತಾತನಾಗಿದ್ದಾರೆ ಅನ್ನೋದು ವಿಶೇಷ. ಟ್ರಂಪ್ ಪುತ್ರ ಎರಿಕ್ ಮತ್ತು ಲಾರಾ ದಂಪತಿಗೆ ಹೆಣ್ಣು ಮಗು ಜನನವಾಗಿದೆ. ಮಗುವಿಗೆ ಕ್ಯಾರೊಲಿನಾ ಡಾರ್ತಿ ಟ್ರಂಪ್ ಅಂತ ಹೆಸರಿಡಲಾಗಿದೆ. ಎರಿಕ್ ದಂಪತಿಗೆ ಇದು ಎರಡನೇ ಮಗು.
ಇನ್ನು 73 ವರ್ಷದ ಡೊನಾಲ್ಡ್ ಟ್ರಂಪ್ ಮೂವರು ಮಹಿಳೆಯರಿಂದ ಒಟ್ಟು 5 ಮಕ್ಕಳನ್ನ ಹೊಂದಿದ್ದಾರೆ. ಈ ಪೈಕಿ ಎರಿಕ್ ಮೂರನೆಯವರು. ಇನ್ನು, ಟ್ರಂಪ್ರ ಹಿರಿಯ ಪುತ್ರ ಡೊನಾಲ್ಡ್ ಜ್ಯೂನಿಯರ್ಗೆ 5 ಮತ್ತು ಪುತ್ರಿ ಇವಾಂಕಾಗೆ ಮೂವರು ಮಕ್ಕಳಿದ್ದಾರೆ. ಇದೀಗ ಎರಿಕ್ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಟ್ರಂಪ್ 10ನೇ ಬಾರಿಗೆ ತಾತನಾದ ಖುಷಿಯಲ್ಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos