“ಅಂಬಾರಿ ಡ್ರೀಮ್” ಗೆ ಪುರಸ್ಕಾರ

“ಅಂಬಾರಿ ಡ್ರೀಮ್” ಗೆ ಪುರಸ್ಕಾರ

ಬೆಂಗಳೂರು, ಆ. 16: ಕೆ ಎಸ್ ಆರ್ ಟಿ‌‌‌ ಸಿಯು ಇತ್ತೀಚೆಗೆ ನೂತನವಾಗಿ ಕಾರ್ಯಚರಣೆಗೊಳಿಸಿರುವ ಬಸ್ಸಿನ ಬ್ರಾಂಡ್‌ “ಅಂಬಾರಿ ಡ್ರೀಮ್ ಕ್ಲಾಸ್ – ಕನಸಿನೊಂದಿಗೆ ಪ್ರಯಾಣಿಸಿ ” ಉಪಕ್ರಮವು ಅಂತರರಾಷ್ಟ್ರೀಯ ಸಿ.ಎಮ್.ಒ ಬ್ರಾಡಿಂಗ್ ಎಕ್ಸ್ ಲೆನ್ಸ್ Supply Chain & Logistics ವರ್ಗದ‌ ಪ್ರಶಸ್ತಿಗೆ ಭಾಜನವಾಗಿದೆ.

ಸಿಎಂಒ ಏಷ್ಯಾವು ಜಾಗತಿಕ ಮಟ್ಟದ ಬ್ರಾಡಿಂಗ್  ಕ್ಷೇತ್ರದ ಜಾಲವಾಗಿದ್ದು,  ಬ್ರಾಡಿಂಗ್  ಕ್ಷೇತ್ರದಲ್ಲಿ ಉನ್ನತ ಮಟ್ಟದ  ಜ್ಞಾನ ವಿನಿಮಯ ನಾಯಕತ್ವದ ವೇದಿಕೆಯಾಗಿದೆ. ಬ್ರಾಡಿಂಗ್  ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಸ್ಥೆಗಳ ಮುಖ್ಯಸ್ಥರು,  ಬ್ರಾಂಡ್ ಪಾಲಕರು ಮತ್ತು ಸೃಜನಶೀಲ ನಾಯಕತ್ವವನ್ನು ಪ್ರೋತ್ಸಾಹಿಸಿ, ಗುರುತಿಸುವ ವ್ಯವಸ್ಥೆ ಇದಾಗಿದೆ.

ಶ್ರೀ.ಶಿವಯೋಗಿ ಸಿ.ಕಳಸದ, ಭಾ.ಆ.ಸೇ, ಮುಖ್ಯಮಂತ್ರಿಯವರ ಕಾರ್ಯದರ್ಶಿ ಹಾಗೂ ವ್ಯವಸ್ಥಾಪಕ ‌ನಿರ್ದೇಶಕರು, ಕೆ ಎಸ್ ಆರ್ ಟಿ‌ ಸಿ‌ ಅವರಿಗೆ, ಎಂಒ ಏಷ್ಯಾ ಸಿಂಗಾಪುರದಲ್ಲಿ ಪ್ರಶಸ್ತಿ ಪ್ರದಾನ ಮಾಡಿದೆ.

ಫ್ರೆಶ್ ನ್ಯೂಸ್

Latest Posts

Featured Videos