ವಿಶ್ವದ 10 ಶ್ರೀಮಂತರ ಪಟ್ಟಿಯಲ್ಲಿರುವ ಮುಕೇಶ್ ಅಂಬಾನಿ ಆಸ್ತಿ ಎಷ್ಟು?

ವಿಶ್ವದ 10 ಶ್ರೀಮಂತರ ಪಟ್ಟಿಯಲ್ಲಿರುವ ಮುಕೇಶ್ ಅಂಬಾನಿ ಆಸ್ತಿ ಎಷ್ಟು?

ನವದೆಹಲಿ, ನ್ಯೂಸ್ ಎಕ್ಸ್ ಪ್ರೆಸ್‍, ಫೆ.27: ರಿಲಯನ್ಸ್ ಇಂಡಸ್ಟ್ರಿ ಮುಖ್ಯಸ್ಥ ಮುಕೇಶ್ ಅಂಬಾನಿ, ವಿಶ್ವದ
10 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವ್ರ
ಬಳಿ 54 ಬಿಲಿಯನ್ ಡಾಲರ್ (ಸುಮಾರು
3.83 ಲಕ್ಷ ಕೋಟಿ ರೂ.) ಆಸ್ತಿಯಿದೆ.

ದಿ ಹೂರನ್ ಗ್ಲೋಬಲ್ ರಿಚ್
ಲಿಸ್ಟ್ ಪಟ್ಟಿಯಲ್ಲಿ ಸತತ ಎರಡನೇ ವರ್ಷವೂ
ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ ಹೆಸರಿದೆ.
ರಿಯಲ್ ಇಂಡಸ್ಟ್ರೀಸ್ ಷೇರಿನಲ್ಲಿ ಹೆಚ್ಚಳವಾಗಿರುವ ಕಾರಣ ಮುಕೇಶ್ ಅಂಬಾನಿ
ಆಸ್ತಿ 3.84 ಲಕ್ಷ ಕೋಟಿಯಾಗಿದ್ದು, ಪಟ್ಟಿಯಲ್ಲಿ
ಮುಕೇಶ್ ಅಂಬಾನಿ 8ನೇ ಸ್ಥಾನದಲ್ಲಿದ್ದಾರೆ.
ಮಂಗಳವಾರ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಮುಕೇಶ್
ಅಂಬಾನಿ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದ್ರೆ ಸಹೋದರ
ಅನಿಲ್ ಅಂಬಾನಿ ನಷ್ಟ ಅನುಭವಿಸುತ್ತಿದ್ದಾರೆ.
ಅನಿಲ್ ಅಂಬಾನಿ ಆಸ್ತಿಯಲ್ಲಿ ಶೇಕಡಾ
65 ರಷ್ಟು ಇಳಿಕೆ ಕಂಡು ಬಂದಿದೆ.
ಅನಿಲ್ ಅಂಬಾನಿಗೆ ಕಳೆದ ಐದು ವರ್ಷಗಳಲ್ಲಿ
ಸುಮಾರು ಐದು ಅರಬ್ ಡಾಲರ್
ನಷ್ಟು ನಷ್ಟವಾಗಿದೆಯಂತೆ. ಈ ವರ್ಷ ಅನಿಲ್
ಅಂಬಾನಿ ಆಸ್ತಿ 1.9 ಅರಬ್ ಡಾಲರ್. ಹಿಂದಿನ
ವಾರವಷ್ಟೆ ಅನಿಲ್ ಅಂಬಾನಿ ವಿರುದ್ಧ
ನ್ಯಾಯಾಂಗ ನಿಂದನೆ ಮಾಡಿದ್ದು ಸಾಬೀತಾಗಿದೆ.
ನಾಲ್ಕು ವಾರಗಳಲ್ಲಿ ಎರಿಕ್ಸನ್ ಗೆ ಹಣ ಪಾವತಿ
ಮಾಡದೆ ಹೋದಲ್ಲಿ ಜೈಲು ಶಿಕ್ಷೆ
ವಿಧಿಸುವುದಾಗಿ ನ್ಯಾಯಾಲಯ ಎಚ್ಚರಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos