ಬಜೆಟ್‌ ಮಂಡನೆ: ನಾಳೆ ಸರ್ವಪಕ್ಷ ಸಭೆ

ಬಜೆಟ್‌ ಮಂಡನೆ: ನಾಳೆ ಸರ್ವಪಕ್ಷ ಸಭೆ

ನವದೆಹಲಿ: ಸಂಸತ್ ಬಜೆಟ್ ಅಧಿವೇಶನದ ಮುನ್ನ ದಿನವಾದ ಸೋಮವಾರ ಕೇಂದ್ರ ಸರ್ಕಾರ ಸರ್ವ ಪಕ್ಷಗಳ ಸಭೆಯನ್ನು ಕರೆದಿದೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ವಾಡಿಕೆಯಂತೆ ಸಭೆ ಕರೆದಿದ್ದು.

ನಾಳೆ ಮಧ್ಯಾಹ್ನ ಸಂಸತ್ತಿನ ಅನಾವರಣದಲ್ಲಿ ಸಭೆ ನಡೆಯಲಿದೆ. ಈ ವೇಳೆ ಸರ್ಕಾರ ಸುಗಮ ಕಲಾಪ ನಡೆಸಲು ಎಲ್ಲಾ ಪಕ್ಷಗಳು ಸಹಕಾರ ಕೋರುವ ನಿರೀಕ್ಷೆ ಇದೆ. ಪ್ರತಿಪಕ್ಷಗಳು ಕೂಡ ಕಲಾಪಕ್ಕೆ ಸಜ್ಜಾಗಿದ್ದು ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಅಧಿವೇಶನದಲ್ಲಿ ಚರ್ಚಿಸುವ ನಿರೀಕ್ಷೆ ಇದೆ. ಜೊತೆಗೆ ಈಗಾಗಲೇ ಯೋಚಿಸಿಕೊಂಡಿರುವ ಅನೇಕ ವಿಚಾರಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಕಾರ್ಯತಂತ್ರ ರೂಪಿಸಿವೆ. ಮಧ್ಯಾಹ್ನ ಎನ್ ಡಿ ಎಸ್‌ ನಾಯಕ ಸಭೆಯು ನಡೆಯಲಿದ್ದು ಅಧಿವೇಶ ಕಾರ್ಯತಂತ್ರ ರೂಪಿಸಲಿದೆ.

ಜನವರಿ 31ರಂದು ಬಜೆಟ್ ಅಧಿವೇಶನ ಶುರುವಾಗಲಿದ್ದು, ಅದಕ್ಕೆ ಒಂದು ದಿನ ಮುನ್ನ, ಜನವರಿ 30ರಂದು ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆ ಕರೆದಿದೆ. ಪ್ರತೀ ಬಜೆಟ್ ಅಧಿವೇಶನಕ್ಕೆ ಮುನ್ನ ಈ ರೀತಿ ಎಲ್ಲಾ ಪಕ್ಷಗಳ ಸಭೆ ನಡೆಯುವುದು ವಾಡಿಕೆಯಾಗಿದೆ. ಸರ್ಕಾರದ ಅಜೆಂಡಾ ಮತ್ತು ವಿಪಕ್ಷಗಳ ಅಭಿಪ್ರಾಯ ಇವೆಲ್ಲವೂ ಈ ಸರ್ವಪಕ್ಷ ಸಭೆಯಲ್ಲಿ ಅನಾವರಣಗೊಳ್ಳುವ ನಿರೀಕ್ಷೆ ಇದೆ.

ಫೆಬ್ರುವರಿ 1ರಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಮಂಡನೆ ಮಾಡಲಿದ್ದಾರೆ. ಅದಾದ ಬಳಿಕ ಬಜೆಟ್ ಬಗ್ಗೆ ಅಧಿವೇಶನದಲ್ಲಿ ಚರ್ಚೆಗಳು ನಡೆಯಲು ಅವಕಾಶ ಇರುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos