ಪ್ರಿಯಕರನಿಗಾಗಿ ಸ್ನೇಹಿತೆಯ ಬಲಿ ಪಡೆದ ಪ್ರೇಯಸಿ!

ಪ್ರಿಯಕರನಿಗಾಗಿ ಸ್ನೇಹಿತೆಯ ಬಲಿ ಪಡೆದ ಪ್ರೇಯಸಿ!

ಮೀರತ್, ಮೇ.2, ನ್ಯೂಸ್ ಎಕ್ಸ್ ಪ್ರೆಸ್: ಉತ್ತರ ಪ್ರದೇಶದ ಮೀರತ್ ನಲ್ಲಿ ಏಪ್ರಿಲ್ 2ರಂದು ನಡೆದ ಸಾವಿನ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬುಧವಾರ ಎಲ್ಲ ಪ್ರಶ್ನೆಗಳಿಗೆ ಪೊಲೀಸರು ಉತ್ತರ ನೀಡಿದ್ದಾರೆ. ಮೀರತ್ ನ ಮನೆಯೊಂದು ಏಪ್ರಿಲ್ 2ರಂದು ಹೊತ್ತಿ ಉರಿದಿತ್ತು. ಮನೆಯಲ್ಲಿದ್ದ ಅಫ್ಸಾನಾ ಸಾವನ್ನಪ್ಪಿದ್ದಾಳೆಂದು ಎಲ್ಲರೂ ನಂಬಿದ್ದರು. ಆದ್ರೆ ಅಲ್ಲಿ ನಡೆದಿದ್ದೇ ಬೇರೆಯಾಗಿತ್ತು. ಸತ್ತಿದ್ದಾಳೆಂದು ನಂಬಿದ್ದ ಅಫ್ಸಾನಾ ಎಲ್ಲರ ಮುಂದೆ ಕಾಣಿಸಿಕೊಂಡಾಗ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿತ್ತು. ಮನೆಯಲ್ಲಿ ಸಿಕ್ಕ ಶವ ಯಾರದ್ದು ಎಂಬ ಪತ್ತೆಗೆ ಪೊಲೀಸರು ಮುಂದಾಗಿದ್ದರು. ಅಫ್ಸಾನಾ ಬಂಧಿಸಿ ವಿಚಾರಣೆ ನಡೆಸಿದ ನಂತ್ರ ಸತ್ಯ ಬಹಿರಂಗವಾಗಿದೆ. ಮನೆಯಲ್ಲಿ ಸತ್ತಿದ್ದು ಅಫ್ಸಾನಾ ಸ್ನೇಹಿತೆ ಎಂಬುದು ಗೊತ್ತಾಗಿದೆ. ವಿವಾಹಿತೆ ಅಫ್ಸಾನಾ, ಪ್ರವೀಣ್ ಎಂಬಾತನನ್ನು ಪ್ರೀತಿ ಮಾಡ್ತಿದ್ದಳಂತೆ. ಪತಿಯನ್ನು ಬಿಟ್ಟು ಪ್ರವೀಣ್ ಜೊತೆ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಳಂತೆ. ಏಪ್ರಿಲ್ 1ರಂದು ಜೀನತ್ ಎಂಬಾಕೆ ನಾಪತ್ತೆಯಾಗಿದ್ದಾಳೆಂದು ಆಕೆ ಸಹೋದರ ದೂರು ನೀಡಿದ್ದ. ಜೀನತ್ ಆಗಾಗ ಅಫ್ಸಾನಾ ಮನೆಗೆ ಬರ್ತಿದ್ದಳಂತೆ. ಎಲ್ಲವನ್ನೂ ಪರಿಶೀಲಿಸಿದಾಗ ಸತ್ತ ಮಹಿಳೆ ಜೀನತ್ ಎಂಬುದು ಗೊತ್ತಾಗಿದೆ. ಪ್ರೀತಿಗಾಗಿ ಅಫ್ಸಾನಾ ಸ್ನೇಹವನ್ನು ಬಲಿ ನೀಡಿದ್ದಾಳೆ. ಜೀನತ್ ಗೆ ನಶೆ ಪದಾರ್ಥ ಕುಡಿಸಿ,‌ ತನ್ನ ಮನೆಯಲ್ಲಿ ಕೂಡಿ ಹಾಕಿ ಮನೆಗೆ ಬೆಂಕಿ ಹಚ್ಚಿದ್ದಾಳೆ. ಎಲ್ಲರೂ ಅಫ್ಸಾನಾ ಸಾವನ್ನಪ್ಪಿದ್ದಾಳೆ ಎಂದುಕೊಳ್ಳಲಿ ಎಂಬುದು ಆಕೆ ಪ್ಲಾನ್. ಆದ್ರೆ ಅಫ್ಸಾನಾ ಮಾಡಿದ ಕೃತ್ಯವನ್ನು ಪ್ರವೀಣ್ ವಿರೋಧಿಸಿದ್ದನಂತೆ. ಆತ ದೂರ ಮಾಡ್ತಿದ್ದಂತೆ ಸಾರ್ವಜನಿಕ ಪ್ರದೇಶದಲ್ಲಿ ಕಾಣಿಸಿಕೊಂಡ ಅಫ್ಸಾನಾ ಪೊಲೀಸ್ ಬಲೆಗೆ ಬಿದ್ದಿದ್ದಾಳೆ.

ಫ್ರೆಶ್ ನ್ಯೂಸ್

Latest Posts

Featured Videos