ಪತ್ನಿಕೊಲೆ ಮಾಡಿದ ಪಾಪಿ ಪತಿ

ಪತ್ನಿಕೊಲೆ ಮಾಡಿದ ಪಾಪಿ ಪತಿ

ಕಲಬುರಗಿ, ನ. 5 : ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿಯನ್ನು ಕೊಲೆ ಮಾಡಿ 3 ದಿನ ಮನೆಯಲ್ಲಿ ಮುಚ್ಚಿಟ್ಟಿದ್ದ ಪ್ರಕರಣ ಜಿಲ್ಲೆ ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಸಂಗೀತಾ ಸಕ್ಕರಗಿ (35) ಕೊಲೆಯಾದ ನತದೃಷ್ಟೆ. ಶ್ರೀಶೈಲ ಸಕ್ಕರಗಿ (45) ಹೆಂಡತಿಯನ್ನು ಕೊಂದ ಪಾಪಿ ಪತಿ. ತನ್ನ ಹೆಂಡತಿ ಸಂಗೀತಾಳನ್ನು ಕೊಲೆ ಮಾಡಿ ಪ್ರಕರಣ ಬೆಳಕಿಗೆ ಬರದಂತೆ ಮಂಚದ ಕೆಳಗೆ 3 ದಿನ ಮುಚ್ಚಿಟ್ಟು, ಅದೇ ಮಂಚದ ಮೇಲೆ ಪಾಪಿ ಪತಿ ಶ್ರೀಶೈಲ ಮಲಗುತ್ತಿದ್ದ ಎನ್ನಲಾಗಿದೆ.
ಮನೆಯಲ್ಲಿ ಶವದ ವಾಸನೆ ಬಂದಿದ್ದರಿಂದ ಸ್ಥಳೀಯರು ಅನುಮಾಗೊಂಡು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದರು. ಪೊಲೀಸರು ಬಂದು ಪರಿಶೀಲನೆ ನಡೆಸಿದ ನಂತರ ಸಂಗೀತಾ ಕೊಲೆಯಾಗಿದ್ದು ಬೆಳಕಿಗೆ ಬಂದಿದೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿ ಶ್ರೀಶೈಲನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos