ಕಾಮುಕರ  ಹೆಡೆಮುಡಿ ಕಟ್ಟಿದ ಪೊಲೀಸ್

ಕಾಮುಕರ  ಹೆಡೆಮುಡಿ ಕಟ್ಟಿದ ಪೊಲೀಸ್

ಹೈದರಾಬಾದ್ , ಡಿ. 6:  ಪಶುವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಗಲ್ಲಿಗೇರಿಸಿ ಎನ್ನುವ ಕೂಗು ಕೇಳಿ ಬರುತ್ತಿರುವಾಗಲೇ, ನಾಲ್ಕೂ ಆರೋಪಿಗಳನ್ನು ಪೊಲೀಸರು ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ್ದಾರೆ.

ಅತ್ಯಾಚಾರ ಹಾಗೂ ಕೊಲೆ ಆರೋಪಿಗಳಾದ ಆರೀಫ್, ಶಿವ, ಚನ್ನಕೇಶವಲು ಹಾಗೂ ನವೀನ್ನನ್ನು ಪೊಲೀಸರು ಪ್ರಕರಣ ಸಂಬಂಧ ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಆರೋಪಿಗಳು ಘಟನೆಯ ಇಂಚಿಂಚು ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.  ಅಲ್ಲದೆ ಇಂದು ಮುಂಜಾನೆ ಆರೋಪಿಗಳನ್ನು ಕೊಲೆ ನಡೆದ ಸ್ಥಳದ ಮಹಜರಿಗಾಗಿ ಪೊಲೀಸರು ಕರೆದೋಯ್ದಿದ್ದರು. ಶಾದ್ನಗರದ ಚಟಾನ್ಪಲ್ಲಿ ಬ್ರಿಡ್ಜ್ ಮೇಲೆ ಆರೋಪಿಗಳು ಪರಾರಿಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ನಾಲ್ವರು ಅತ್ಯಾಚಾರಿಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ತೀವ್ರ ಗಾಯಗೊಂಡ ಇವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನ್ಯಾಷನಲ್ ಹೈವೇ 44ನಲ್ಲಿ ಘಟನೆ ನಡೆದಿದೆ.  ಬೆಳಗ್ಗಿನ ಜಾವ 3.30ಕ್ಕೆ ನಾಲ್ವರು ಅತ್ಯಾಚಾರಿಗಳ ಎನ್ಕೌಂಟರ್ ಮಾಡಲಾಗಿದೆ.

 

 

 

ಫ್ರೆಶ್ ನ್ಯೂಸ್

Latest Posts

Featured Videos