`ಸಲಗ’ದ ಬೆನ್ನಿಗೆ ನಿಂತ ಹ್ಯಾಟ್ರಿಕ್ ಹೀರೋ

`ಸಲಗ’ದ ಬೆನ್ನಿಗೆ ನಿಂತ ಹ್ಯಾಟ್ರಿಕ್ ಹೀರೋ

ಬೆಂಗಳೂರು, ಡಿ. 28: ಸ್ಯಾಂಡಲ್‌ವುಡ್‌ನ ಕರಿಚಿರತೆ ದುನಿಯ ವಿಜಯ್ ಸದ್ಯ ಬಹು ನಿರೀಕ್ಷೆಯ `ಸಲಗ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ವಿಜಿ ಅಭಿನಯದ ಜೊತೆಗೆ ನಿರ್ದೇಶನ ಮಾಡುತ್ತಿರುವ ಸಿನಿಮಾವಿದು. ಬ್ಲ್ಯಾಕ್ ಕೋಬ್ರಾ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿರುವ ಸಲಗ, ಈಗಾಗಲೆ ಬಹುತೇಕ ಚಿತ್ರೀಕರಣ ಮುಗಿಸಿ, ಕೊನೆ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಈಗ ಚಿತ್ರತಂಡ ಆಡಿಯೋ ರಿಲೀಸ್ ಮಾಡಲು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ.

ಸಲಗ ಚಿತ್ರದ ಆಡಿಯೋ 2020 ಜನವರಿ 5 ಕ್ಕೆ ರಿಲೀಸ್ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. `ಸಲಗ’ ಚಿತ್ರದ `ರಾ’ ಮೇಕಿಂಗ್ ನೋಡಿ ಜನ ಜೈಕಾರ ಹಾಕಿದ್ರು. ವಿಶೇಷ ಅಂದರೆ ಚಿತ್ರದ ಆಡಿಯೋ ರಿಲೀಸ್‌ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಥಿತಿಯಾಗಿ ಆಗಮಿಸಲಿದ್ದಾರಂತೆ. ಅಂದಹಾಗೆ ಸಲಗ ಬಹುತೇಕ ಟಗರು ತಂಡದಿಂದ ನಿರ್ಮಾಣವಾಗುತ್ತಿರುವ ಸಿನಿಮಾ. ಸದ್ಯ ಶಿವಣ್ಣ ಆಡಿಯೋ ಲಾಂಚ್ ನಲ್ಲಿ ಭಾಗಿಯಾಗುವ ಮೂಲಕ ಮತ್ತೊಮ್ಮೆ ಟಗರು ಟೀಂ ಸಮಾಗಮವಾಗಲಿದೆ.

ಸಲಗ ಚಿತ್ರದ ಹಾಡುಗಳು ಎ2 ಮ್ಯೂಸಿಕ್ ಪಾಲಾಗಿದೆ. ಹಾಡುಗಳು ಎ2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ನೋಡಬಹುದು. ಸಲಗ ಚಿತ್ರದ ಹಾಡುಗಳಿಗೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಿರ್ಮಾಪಕ ಕೆಪಿ ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ. ಟಗರು ಟೀಮ್ ಮಾಡ್ತಿರೋ ಸಲಗ ಚಿತ್ರಕ್ಕೆ ಶಿವಣ್ಣ ಮುಕ್ತ ಕಂಠದಿಂದ ಶುಭಹಾರೈಸಿ, ಸಲಗದ ಬೆನ್ನಿಗೆ ನಿಂತಿದ್ದಾರೆ. ಇದು ಸಲಗ ತಂಡಕ್ಕೆ ಮತ್ತಷ್ಟು ಬಲ ತಂದಿದ್ದು, ಸಲಗದ ರೇಂಜ್ ದಿನೇ ದಿನೇ ದೊಡ್ಡದಾಗ್ತಿದೆ. ದುನಿಯ ವಿಜಯ್ ಸಿನಿಮಾ ರಿಲೀಸ್ ಆಗದೆ ಸುಮಾರು 2 ವರ್ಷಗಳಾಗಿದೆ. ಸಲಗ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದ್ದು ಮುಂದಿನ ವರ್ಷ ತೆರೆಗೆ ಬರಲಿದೆ.

 

 

 

 

ಫ್ರೆಶ್ ನ್ಯೂಸ್

Latest Posts

Featured Videos