ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಲು ಕರೆ

ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಲು ಕರೆ

 ಗದಗ, ಮಾ. 04: ಹೆಚ್.ಐ.ವಿ ಸೋಂಕು ಸೂಕ್ಷ್ಮ ಕಾಯಿಲೆಯಾಗಿದ್ದು, ಎ.ಆರ್.ಟಿ. ಔಷಧ ತೆಗೆದುಕೊಳ್ಳಲು ಬರುವ ರೋಗಿಗಳೊಂದಿಗೆ ಸಿಬ್ಬಂದಿ ಸೌಜನ್ಯ ಹಾಗೂ ಸಹಾನುಭೂತಿಯಿಂದ ವರ್ತಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ. ಸಲಗೇರೆ ಕರೆ ನೀಡಿದರು.

ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಆಶ್ರಯದಲ್ಲಿ ಎ.ಆರ್.ಟಿ. ಫಲಾನುಭವಿಗಳು ಹಾಗೂ ಸಿಬ್ಬಂದಿಯವರ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.

ಹೆಚ್.ಐ.ವಿ. ಸೋಂಕು ಪತ್ತೆಯಾದ ತಕ್ಷಣ ಜೀವನವೇ ಮುಗಿಯಿತು ಅಂದುಕೊಳ್ಳುವ ರೋಗಿಗಳಿಗೆ ಎ.ಆರ್.ಟಿ. ಔಷಧ  ಬದುಕಲು ಆಶಾಭಾವನೆ ಮೂಡಿಸಿದ್ದರೂ ಔಷಧಿಯ ಜೊತೆಗೆ ಸಿಬ್ಬಂದಿಯವರ ಸಿಹಿಯಾದ ಸಾಂತ್ವನದ ಮಾತುಗಳು ರೋಗಿಗಳಿಗೆ ಆತ್ಮಸ್ತೆöÊರ್ಯ ಹೆಚ್ಚಿಸುವ ನೈತಿಕ ಸೇವೆ ಮಾಡಬೇಕು ಎಂದು ಎಸ್.ಜಿ.ಸಲಗೇರೆ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ ಬಸರಿಗಿಡದ ಮಾತನಾಡಿ, ಹೆಚ್.ಐ.ವಿ. ಸೋಂಕಿತರಿಗೆ ಆಪ್ತಸಮಾಲೋಚನೆ ಮೂಲಕ ಧೈರ್ಯ ನೀಡಬೇಕಲ್ಲದೇ, ಅವರೊಂದಿಗೆ ಉತ್ತಮ ಭಾಂದವ್ಯ ಹೊಂದಬೇಕು. ಸೇವೆಯ ಸಂದರ್ಭದಲ್ಲಿ ಎ.ಆರ್.ಟಿ. ರೋಗಿಗಳಿಗೆ ತೊಂದರೆಯಾಗದAತೆ ಜಾಗೃತಿ ವಹಿಸಬೇಕು ಎಂದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಎಸ್.ಎಸ್. ನೀಲಗುಂದ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಿ.ಸಿ. ಕರಿಗೌಡರ ಮಾತನಾಡಿದರು.  ಕಾನೂನು ಸೇವಾ ಪ್ರಾಧಿಕಾರದ ಪ್ಯಾನಲ್ ವಕೀಲ ಕುಮಾರ ಜಿ.ವಿ., ಇಲಾಖೆ ಜಿಲ್ಲಾ ಐಸಿಟಿಸಿ ಮೇಲ್ವಿಚಾರಕರಾದ ಆರೋಗ್ಯ ಬಸವರಾಜ ಲಾಲಗಟ್ಟಿ, ಡಾ.ರೀನಾ ಕಟ್ಟಿಮನಿ ಸೇರಿದಂತೆ ಎ.ಆರ್.ಟಿ.ಯ ಎಲ್ಲ ಸಿಬ್ಬಂದಿ ಇದ್ದರು.

 

 

ಫ್ರೆಶ್ ನ್ಯೂಸ್

Latest Posts

Featured Videos