ಮಗುವನ್ನು ಕಚ್ಚಿಕೊಂದ ಬೀದಿನಾಯಿ!

ಮಗುವನ್ನು ಕಚ್ಚಿಕೊಂದ ಬೀದಿನಾಯಿ!

ಲಕ್ನೋ, ಜ. 14 : ಖಾಸಗಿ ಆಸ್ಪತ್ರೆಯ ಆಪರೇಷನ್ ಥಿಯೇಟರ್ ಒಳಗೆ ನುಗ್ಗಿದ ಬೀದಿ ನಾಯಿ ನವಜಾತ ಶಿಶುವನ್ನು ಕಚ್ಚಿ ಕೊಂದು ಹಾಕಿರುವ ಹೃದಯವಿದ್ರಾವಕ ಘಟನೆ ಉತ್ತರಪ್ರದೇಶದ ಫಾರೂಖಾಬಾದ್ ನಲ್ಲಿ ನಡೆದಿದೆ.
ಆಘಾತಕಾರಿ ಘಟನೆ:
ರವಿ ಕುಮಾರ್ ಎಂಬವರು ಗರ್ಭಿಣಿ ಪತ್ನಿ ಕಾಂಚನಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಆಕೆಯನ್ನು ಸಿ ಸೆಕ್ಷನ್ ಆಪರೇಷನ್ ಥಿಯೇಟರ್ ನೊಳಗೆ ಕರೆದೊಯ್ದಿದ್ದರು. ಕಾಂಚನ ಗಂಡು ಮಗುವಿಗೆ ಜನ್ಮ ನೀಡಿದ್ದು, ಬಳಿಕ ಬಾಣಂತಿಯನ್ನು ಬೇರೆ ವಾರ್ಡ್ ಗೆ ಸ್ಥಳಾಂತರಿಸಿದ್ದರು. ಆದರೆ ಮಗುವನ್ನು ಆಪರೇಷನ್ ಥಿಯೇಟರ್ ನೊಳಗೆ ಇರಿಸಿದ್ದರು.
ಆದರೆ ಒಂದು ಗಂಟೆ ನಂತರ ಮಗು ಸಾವನ್ನಪ್ಪಿರುವುದಾಗಿ ಕುಟುಂಬದ ಸದಸ್ಯರಿಗೆ ನರ್ಸ್ ತಿಳಿಸಿರುವುದಾಗಿ ಮಗುವಿನ ತಂದೆ ರವಿ ಆರೋಪಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos