6ನೇ ವರ್ಷದ ಅಂತರಾಷ್ಟ್ರೀಯ ಭಾವೈಕತೆಯ ಸಾಂಸ್ಕೃತಿಕ ಕಾರ್ಯಕ್ರಮ

6ನೇ ವರ್ಷದ ಅಂತರಾಷ್ಟ್ರೀಯ ಭಾವೈಕತೆಯ ಸಾಂಸ್ಕೃತಿಕ ಕಾರ್ಯಕ್ರಮ

ಪೀಣ್ಯ ದಾಸರಹಳ್ಳಿ, ಸೆ. 23: ಜಾಲಹಳ್ಳಿಯ ಸೈಂಟ್ ಕ್ಲಾರೆಟ್ ಶಾಲೆ ಹಾಗೂ ಅಂಥೋಣಿ  ಕ್ಲಾರೆಟ್ ಶಾಲೆಯು ಹಿರೋಷಿಮಾದ ಇಂಡೋ ಚಾಯ್ ಕ್ಲಬ್ ನಲ್ಲಿ 6ನೇ ವರ್ಷದ ಅಂತರಾಷ್ಟ್ರೀಯ ಭಾವೈಕತೆಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.

ಪ್ರಾಂಶುಪಾಲರಾದ ರೆ. ಫಾದರ್ ಬೆನ್ನಿಮಾಥ್ಯು ಮತ್ತು ರೆ. ಫಾದರ್ ಜೋಷಿ ಅವರೊಂದಿಗೆ ವಿದ್ಯಾರ್ಥಿಗಳು ಭಾಗವಹಿಸಿ ಭಾರತ ದೇಶದ ಭರತನಾಟ್ಯಂ ಹಾಗೂ ಸಾಂಪ್ರದಾಯಿಕ ಸಂಗೀತ ಗಳೊಂದಿಗೆ ವೀಡಿಯೋದ ಮೂಲಕ ಪ್ರಸ್ತುತಪಡಿಸಲಾಯಿತು. ಆದೇಶದ ಜನಪ್ರಿಯ ಹಾಡುಗಳಾದ ಪ್ರೊಲಾಂಗ್ಸ್  ಕಲಿತು ಹಾಡಿದ್ದನ್ನು ಸಭೆ ಮೆಚ್ಚುಗೆ ವ್ಯಕ್ತಪಡಿಸಿತು.

ಜಪಾನಿನ ಟೋಕಿವಾಡೈ ಸಮುದಾಯದವರ ನೃತ್ಯವನ್ನು ಕೊಡಾನಿ ಪ್ರಾಥಮಿಕ ಶಾಲೆ ಮತ್ತು ಟಕೆಡಾ ಪ್ರೌಢಶಾಲೆಯಲ್ಲಿ ಪ್ರದರ್ಶಿಸಲಾಯಿತು. ಪ್ರತಿಯಾಗಿ ಆ ಶಾಲೆಯ ಮಕ್ಕಳು ಭಾರತದ ಸಾಂಪ್ರದಾಯಿಕ ಸಂಗೀತವನ್ನು ಆಡುವ ಮೂಲಕ ಸಾಂಸ್ಕೃತಿಕತೆಯ ಭಾವೈಕತೆಯನ್ನು ತೋರಿಸಿದರು. ಜೊತೆಗೆ ಜಪಾನಿನ ಡ್ರಮ್ ವಾಡೈಕೆ ವಾದನ ನುಡಿಸಿ, ಸೂರನ ಬುಕ್ಕಿ ಕಂಡಮಾ ನೃತ್ಯ ಪ್ರದರ್ಶಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos