ಪಾಕ್‍ನಲ್ಲಿ ಡಾಕ್ಟರ್ ಎಡವಟ್ಟು..! 400 ಮಕ್ಕಳಿಗೆ ‘ಹೆಚ್‍ಐವಿ’ ಸೋಂಕು

ಪಾಕ್‍ನಲ್ಲಿ ಡಾಕ್ಟರ್ ಎಡವಟ್ಟು..! 400 ಮಕ್ಕಳಿಗೆ ‘ಹೆಚ್‍ಐವಿ’ ಸೋಂಕು

ಪಾಕಿಸ್ತಾನ, ಮೇ. 17, ನ್ಯೂಸ್ ಎಕ್ಸ್ ಪ್ರೆಸ್: ಪಾಕಿಸ್ತಾನ 400 ಹೆಚ್ಚು ಮಕ್ಕಳಲ್ಲಿ ಎಚ್ ಐವಿ ವೈರಸ್ ಪತ್ತೆಯಾಗಿದೆ. ಸುದ್ದಿ ಕೇಳಿ ಇಡೀ ಪಾಕಿಸ್ತಾನದ ಜನರು ಬೆಚ್ಚಿಬಿದ್ದಿದ್ದಾರೆ. ಪಾಕಿಸ್ತಾನದ ಲರ್ಕಾನಾ ಜಿಲ್ಲೆಯಲ್ಲಿ 410 ಮಕ್ಕಳು ಹಾಗೂ 100 ಕ್ಕೂ ಹೆಚ್ಚು ವಯಸ್ಕರಲ್ಲಿ ಎಚ್ಐವಿ ವೈರಸ್ ಕಾಣಿಸಿಕೊಂಡಿದೆ.

ಡಾಕ್ಟರ್ ಎಡವಟ್ಟು..!

ಮಕ್ಕಳಿಗೆ ಹೆಚ್‍ಐವಿ ಕಾಣಿಸಿಕೊಳ್ಳಲು ಸ್ಥಳೀಯ ಡಾಕ್ಟರ್ ಮುಜಾಪ್ಫರ್ ಗಂಘಾರೋ ಎಡವಟ್ಟೇ ಕಾರಣ ಎನ್ನಲಾಗಿದೆ. ಒಂದೇ ಬಾರಿ ಎಲ್ಲಾ ಮಕ್ಕಳಿಗೂ ಸೋಂಕು ಹರಡಲು ಆ ಜಿಲ್ಲೆಯ ವ್ಯಾಪ್ತಿಯಲ್ಲಿ ಬಳಸಲಾದ ಅವೈಜ್ಞಾನಿಕ ಸಿರಿಂಜ್‍ಗಳೇ ಕಾರಣ ಎಂದು ಪಾಕ್‍ನ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಮಕ್ಕಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಮುಜಾಪ್ಫರ್ ಗಂಘಾರೋ ಅವರು ಅಜಾಗರೂಕತೆಯಿಂದ ಸುಮಾರು 400 ಕ್ಕೂ ಹೆಚ್ಚು ಮಕ್ಕಳು ಹಾಗೂ 100 ಕ್ಕೂ ಹೆಚ್ಚು ವಯಸ್ಕರರು ಹೆಚ್‍ಐವಿ ಸೋಂಕಿಗೆ ಒಳಗಾಗಿದ್ದಾರೆ.

ಆತಂಕದಲ್ಲಿ ಹೆಚ್‍ಐವಿ ನಿಯಂತ್ರಣ ಸಂಸ್ಥೆ

ಲರ್ಕಾನಾ ಭಾಗದಲ್ಲಿ ಹೆಚ್‍ಐವಿ ಹೆಚ್ಚಾಗುತ್ತಿದೆ ಎಂದು ಅನುಮಾನಗೊಂಡ ಪಾಕಿಸ್ತಾನ ಹೆಚ್‍ಐವಿ ನಿಯಂತ್ರಣ ಸಂಸ್ಥೆ ಅಲ್ಲಿನ ಸುಮಾರು 13,800 ಜನರನ್ನು ಪರೀಕ್ಷೆ ಮಾಡಿದೆ. ಪರೀಕ್ಷೆಗೆ ಒಳಪಡಿಸಿದಾಗ ಹೆಚ್‍ಐವಿ ಸೋಂಕು ಇರೋದು ಗೊತ್ತಾಗಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos